ಮಂಗಳೂರು: ಶೌಚಗೃಹದ ಗೋಡೆ ಕುಸಿದು ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಎಳತ್ತೂರು ಗ್ರಾಮದ ನೆಲಗುಡ್ಡೆ ಎಂಬಲ್ಲಿ ನಡೆದಿದೆ.
ಶೌಚಗೃಹದ ಗೋಡೆ ಕುಸಿದು ವೃದ್ಧೆ ಸಾವು
ವೃದ್ಧೆ ಸ್ನಾನ ಮಾಡಲೆಂದು ಶೌಚಗೃಹದ ಬಳಿ ಹೋದಾಗ ಅಲ್ಲಿನ ಗೋಡೆ ಈಕೆಯ ಮೇಲೆ ಕುಸಿದಿದೆ. ಪರಿಣಾಮ ವೃದ್ಧೆ ಸಾವಿಗೀಡಾಗಿದ್ದಾರೆ.
ವೃದ್ಧೆ ಸಾವು
ಉಡುಪಿ ಜಿಲ್ಲೆಯ ಉಚ್ಚಿಲ ನಿವಾಸಿ ಜಾನಕಿ ಆಚಾರ್ಯ (70) ಮೃತ ಮಹಿಳೆ. ಜಾನಕಿಯವರು ತಿಂಗಳ ಹಿಂದೆ ನೆಲಗುಡ್ಡೆಯಲ್ಲಿರುವ ಮಗಳ ಮನೆಗೆ ಬಂದಿದ್ದು, ಸ್ನಾನ ಮಾಡಲೆಂದು ಶೌಚಗೃಹಕ್ಕೆ ತೆರಳಿರುವ ಸಂದರ್ಭ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.