ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರೊಂದಿಗೆ ನಡೆದುಕೊಳ್ಳುವ ರೀತಿಅತಿರೇಕವಾಗುತ್ತಿದ್ದು, ಗೂಂಡಾಗಿರಿ ನಿಲ್ಲಿಸದಿದ್ದರೆ ಗೆರಿಲ್ಲಾ ಯುದ್ಧದ ಶೈಲಿಯಲ್ಲಿ ಬಡಿದು ಬುದ್ಧಿ ಕಲಿಸಬೇಕಾದೀತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಎಚ್ಚರಿಸಿದ್ದಾರೆ.
ಉಳ್ಳಾಲ ತಲಪಾಡಿ ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹ: ಹೋರಾಟದ ಎಚ್ಚರಿಕೆ - Talpady toll staff
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಉಳ್ಳಾಲ ತಲಪಾಡಿ ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹ: ಹೋರಾಟದ ಎಚ್ಚರಿಕೆ to-exempt-locals-at-ullala-talpadi-toll](https://etvbharatimages.akamaized.net/etvbharat/prod-images/768-512-10677588-thumbnail-3x2-vis.jpg)
ಉಳ್ಳಾಲ ತಲಪಾಡಿ ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಹೊರಾಟ
ಉಳ್ಳಾಲ ತಲಪಾಡಿ ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹ
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ಮಾತನಾಡಿ, ಫೆ. 19ರ ಶುಕ್ರವಾರ ಸಂಜೆ ತನಕ ಅವಕಾಶ ಕೊಡುತ್ತಿದ್ದೇವೆ. ಅದರೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಈ ಹಿಂದಿನ ವ್ಯವಸ್ಥೆಯೇ ಮುಂದುವರಿಯಬೇಕು. ಸದ್ಯ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಸಾಗುತ್ತಿದೆ.
ನಮಗೆ ಸುಭಾಷ್ ಚಂದ್ರ ಭೋಸ್ರ ದಾರಿಯಲ್ಲಿ ಹೋಗಲು ಗೊತ್ತು, ಅದಕ್ಕೆ ಅವಕಾಶ ಕೊಡಬೇಡಿ. ಲೋಪಗಳನ್ನು ಸರಿಪಡಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.