ಮಂಗಳೂರು:ನಗರದ ಮುಲ್ಕಿಯ ಇಂದಿರಾನಗರದ ಬೊಳ್ಳೂರು ಎಂಬಲ್ಲಿ ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ನಿನ್ನೆ ಸಿಡಿಲು ಬಡಿದಿದ್ದು, ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾನೆ.
ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ಬಡಿದ ಸಿಡಿಲು.. ಬಾಲಕನೊಬ್ಬನ ಸಾವು, ಕೋಮಾಗೆ ಜಾರಿದ ಮತ್ತೊಬ್ಬ! - ಮಂಗಳೂರು ಸುದ್ದಿ,
ಆಟವಾಡುತ್ತಿದ್ದಾಗ ಮಕ್ಕಳಿಬ್ಬರಿಗೆ ಸಿಡಿಲು ಬಡಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ದಕ್ಷಿಣ - ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇಂದಿರಾನಗರ ಬೊಳ್ಳೂರು ನಿವಾಸಿ ಮನ್ಸೂರ್ ಎಂಬವರ ಪುತ್ರ ನಿಹಾನ್ (5) ಮೃತಪಟ್ಟ ಬಾಲಕ. ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತೇಶ್ (6) ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಂದಿರಾನಗರ ಬೊಳ್ಳೂರಿನ ಮಸೀದಿ ಹಿಂಭಾಗದ ಖಾಸಗಿ ಜಾಗದಲ್ಲಿ ನಿನ್ನೆ ಸಂಜೆ ನಿಹಾನ್ ಹಾಗೂ ಮಾರುತೇಶ್ ಆಟವಾಡುತ್ತಿದ್ದರು. ಈ ಸಂದರ್ಭ ಸಿಡಿಲು ಬಡಿದಿದ್ದು, ಮಕ್ಕಳಿಬ್ಬರೂ ಮೂರ್ಛೆ ತಪ್ಪಿ ಸ್ಥಳದಲ್ಲಿಯೇ ಬಿದ್ದಿದ್ದರು. ತಕ್ಷಣ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೇ ನಿಹಾನ್ ಮೃತಪಟ್ಟಿದ್ದಾನೆ. ಮಾರುತೇಶ್ ಕೋಮಾ ಸ್ಥಿತಿಯಲ್ಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.