ಕರ್ನಾಟಕ

karnataka

ETV Bharat / state

ಕೊರೊನಾ ಕಂಟಕ.. ಪ್ರಯೋಗಾಲಯಕ್ಕೆ 8 ಜನರ ಗಂಟಲು ದ್ರವ ಪರೀಕ್ಷೆ.. - Throat fluid examination in mangalore

ವಿದೇಶದಿಂದ ಬಂದಿರುವ 60 ಜನರಿಗೆ ಅವರುಗಳ ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವತ್ತಿಗೆ 6 ಮಂದಿ ವೈದ್ಯಕೀಯ ನಿಗಾದ ಅವಧಿ ಪೂರ್ಣಗೊಳಿಸಲಾಗಿದೆ.

Throat fluid examination to the laboratory in mangalore
ಜಿಲ್ಲಾಡಳಿತದಿಂದ ಶಂಕಿತರ ಮೇಲೆ ನಿಗಾ

By

Published : Mar 14, 2020, 11:40 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶದಿಂದ ಇಂದು ( ಮಾ.14) ವಾಪಸಾದ 8 ಜನರ ಗಂಟಲು ದ್ರವ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿ ಸ್ಪಷ್ಟಪಡಿಸಿದೆ.

ಜಿಲ್ಲಾಡಳಿತದಿಂದ ಶಂಕಿತರ ಮೇಲೆ ನಿಗಾ..

ವಿದೇಶದಿಂದ ಬಂದ 836 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 8 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಲಾದ ನಾಲ್ಕು ಮಂದಿಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದೆ. ಇದರಲ್ಲಿ ಯಾರಿಗೂ ಕೊರೊನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ನಾಲ್ಕು ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿದೇಶದಿಂದ ಬಂದಿರುವ 60 ಜನರಿಗೆ ಅವರುಗಳ ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವತ್ತಿಗೆ 6 ಮಂದಿ ವೈದ್ಯಕೀಯ ನಿಗಾದ ಅವಧಿ ಪೂರ್ಣಗೊಳಿಸಲಾಗಿದೆ. ಅವರಲ್ಲಿ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ವಿವರಿಸಿದೆ.

ABOUT THE AUTHOR

...view details