ಮಂಗಳೂರು(ದಕ್ಷಿಣ ಕನ್ನಡ) : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2022ರ ಸಾಲಿನಲ್ಲಿ ಕೊಡಮಾಡುವ ಗೌರವ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಕೆ ಜಗದೀಶ್ ಪೈ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಕಾಡೆಮಿ ಕೊಡಮಾಡುವ 2022ರ ಸಾಲಿನ ಗೌರವ ಪ್ರಶಸ್ತಿಗೆ, ಕೊಂಕಣಿ ಸಾಹಿತ್ಯದಲ್ಲಿ ಮಂಗಳೂರಿನ ಎಚ್ ಎಂ ಪೆರ್ನಾಲ್, ಕೊಂಕಣಿ ಕಲಾ ವಿಭಾಗದಲ್ಲಿ ರಮೇಶ್ ಕಾಮತ್, ಕೊಂಕಣಿ ಜಾನಪದ ವಿಭಾಗದಲ್ಲಿ ಕುಮುದಾ ಗಡಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಮೂವರು ಸಾಧಕರ ಆಯ್ಕೆ ಸೆಪ್ಟೆಂಬರ್ 18ರಂದು ಬೆಂಗಳೂರಿನ ಮಲ್ಲೇಶ್ವರಂನ ಕಾಶೀಮಠದಲ್ಲಿ ನಡೆಯಲಿರುವ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಸಚಿವರಾದ ಸಿ ಎನ್ ಅಶ್ವತ್ಥನಾರಾಯಣ, ಸುನಿಲ್ ಕುಮಾರ್ , ಸಂಸದ ಸದಾನಂದ ಗೌಡ, ಶಾಸಕರಾದ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :ಜನಸ್ಪಂದನ ಕಾರ್ಯಕ್ರಮ.. ಪ್ರವೀಣ್ ನೆಟ್ಟಾರು ಮನೆಯವರಿಗೆ ಉದ್ಯೋಗ: ಬೊಮ್ಮಾಯಿ ಘೋಷಣೆ