ಕರ್ನಾಟಕ

karnataka

ETV Bharat / state

ಬೈಕ್ ಪಾರ್ಕ್ ಮಾಡಿದ್ದಕ್ಕೆ ಸವಾರನ ಮೇಲೆ ಹಲ್ಲೆ: ವೀಡಿಯೋ ವೈರಲ್ - ಮಂಗಳೂರಿನಲ್ಲಿ ಬೈಕ್ ಪಾರ್ಕ್ ಮಾಡಿದ್ದಕ್ಕೆ ಸವಾರನ ಮೇಲೆ ಹಲ್ಲೆ

ಕೆಲಸಕ್ಕೆಂದು ಮಂಗಳೂರಿಗೆ ತೆರಳುವ ವೇಳೆ ಕಿನ್ನಿಗೋಳಿಯ ಸ್ಥಳದಲ್ಲಿ ವ್ಯಕ್ತಿಯೋರ್ವ ಬೈಕ್​ ಪಾರ್ಕ್​ ಮಾಡಿದ್ದು, ಈ ಕಾರಣಕ್ಕಾಗಿ ಕಟ್ಟಡ ಮಾಲೀಕರು ಬೈಕ್​ ಸವಾರನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯ ದೃಶ್ಯಾವಳಿಗಳು ಇದೀಗ ಎಲ್ಲೆಡೆ ವೈರಲ್​ ಆಗತೊಡಗಿವೆ.

Three People Assaulted on a Biker
ಬೈಕ್​ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ

By

Published : Dec 30, 2020, 2:52 PM IST

ಮಂಗಳೂರು: ಬೈಕ್ ಪಾರ್ಕ್ ಮಾಡಿದ್ದಕ್ಕಾಗಿ ಕಟ್ಟಡ ಮಾಲೀಕರು ಬೈಕ್ ಸವಾರನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ನಗರದ ಹೊರವಲಯದಲ್ಲಿನ ಕಿನ್ನಿಗೋಳಿ ಪೇಟೆಯಲ್ಲಿ ನಡೆದಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ‌.

ಬೈಕ್​ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ

ಗುತ್ತಕಾಡು ನಿವಾಸಿ ನರೇಂದ್ರ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಈತ ಮಂಗಳೂರಿನಲ್ಲಿ ನೌಕರಿ ಹೊಂದಿದ್ದರಿಂದ ಕಿನ್ನಿಗೋಳಿ ಪೇಟೆಯಲ್ಲಿ ಬೈಕ್ ನಿಲ್ಲಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದರು. ಎಂದಿನಂತೆ ಇಂದು ಸಹ ಬೆಳಗ್ಗೆ ಬೈಕ್ ನಿಲ್ಲಿಸುತ್ತಿದ್ದಂತೆ ಕಟ್ಟಡ ಮಾಲೀಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ವ್ಯಕ್ತಿಗಳು ನರೇಂದ್ರ ಅವರನ್ನು ಹಿಡಿದಿದ್ದು, ಓರ್ವ ದೊಣ್ಣೆಯಿಂದ ಹಲ್ಲೆ ನಡೆಸುತ್ತಿದ್ದಾರೆ‌. ಹಲ್ಲೆಯಿಂದ ನರೇಂದ್ರ ಅವರ ಕೈ ಮುರಿತಕ್ಕೊಳಗಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಟ್ಟಡಕ್ಕೂ, ಪಾರ್ಕಿಂಗ್ ಜಾಗಕ್ಕೂ ಸಂಬಂಧವಿಲ್ಲ ಎಂದು ಕಟ್ಟಡ ಮಾಲಿಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details