ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಇಬ್ಬರು ಬಾಲಕಿಯರು ಸೇರಿ ಮೂವರು ಕೊರೊನಾದಿಂದ ಗುಣಮುಖ - Three member recover from corona
ಕೊರೊನಾ ಪಾಸಿಟಿವ್ ಬಂದು ಚಿಕಿತ್ಸೆಗೆ ಒಳಗಾಗಿದ್ದ ಮೂವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಬಂಟ್ವಾಳದ 16 ವರ್ಷದ ಬಾಲಕಿ, ಬೋಳೂರಿನ 11 ವರ್ಷದ ಬಾಲಕಿ ಮತ್ತು 62 ವರ್ಷದ ವ್ಯಕ್ತಿ ಗುಣಮುಖರಾದವರು.

ಬಂಟ್ವಾಳದ 16 ವರ್ಷದ ಬಾಲಕಿ, ಬೋಳೂರಿನ 11 ವರ್ಷದ ಬಾಲಕಿ ಮತ್ತು 62 ವರ್ಷದ ವ್ಯಕ್ತಿ ಗುಣಮುಖರಾದವರು. ಇದರಲ್ಲಿ ಬೋಳೂರಿನ 11 ವರ್ಷದ ಬಾಲಕಿ ಮತ್ತು 62 ವರ್ಷದ ವ್ಯಕ್ತಿ ಅಜ್ಜ-ಮೊಮ್ಮಗಳು. 62 ವರ್ಷದ ವ್ಯಕ್ತಿಯ ಪತ್ನಿ ಮತ್ತು ಬಂಟ್ವಾಳದ 16 ವರ್ಷದ ಬಾಲಕಿಯ ತಾಯಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇನ್ನು ಈ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ 302 ಮಂದಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಹಿಂದಿನ ಮಂದಿಯನ್ನೂ ಸೇರಿಸಿ ಒಟ್ಟು 428 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. 45 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈವರೆಗೆ ಒಟ್ಟು 41,594 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ.