ಕರ್ನಾಟಕ

karnataka

ETV Bharat / state

ಲಾರಿಯಿಂದ ಕಾರಿನ ಮೇಲೆ ಬಿದ್ದ ಬೃಹತ್​ ಪೈಪ್‌: ಮೂವರ ಸಾವು, ಹೆದ್ದಾರಿ ಸಂಚಾರ ಸ್ಥಗಿತ - Three killed in Mangalore accident

ಲಾರಿಯೊಂದು ಬೃಹತ್​ ಗಾತ್ರದ ಪೈಪ್​ ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ, ಸನಿಹದಲ್ಲೇ ಸಂಚರಿಸುತ್ತಿದ್ದ ಕಾರಿನ​ ಮೇಲೆ ಭಾರಿ ಗಾತ್ರದ ಪೈಪ್​ ಬಿದ್ದಿದೆ.

ಕಾರಿನ ಮೇಲೆ ಬಿದ್ದ ಬೃಹತ್​ ಪೈಪ್​,  Three killed in Mangalore accident
ಕಾರಿನ ಮೇಲೆ ಬಿದ್ದ ಬೃಹತ್​ ಪೈಪ್​

By

Published : Dec 20, 2019, 7:23 PM IST

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯಿಂದ ಕಾರಿನ ಮೇಲೆ ಬೃಹತ್​ ಗಾತ್ರದ ಪೈಪ್​ ಬಿದ್ದು ಮೂವರು ಸಾವಿಗೀಡಾದ ದುರ್ಘಟನೆ ನಡೆದಿದೆ.

ರಾಷ್ಟೀಯ ಹೆದ್ದಾರಿ 75 ರ ಗುಂಡ್ಯ ಸಮೀಪದ ಉದನೆ ಎಂಬಲ್ಲಿ ಲಾರಿಯೊಂದು ಬೃಹತ್​ ಗಾತ್ರದ ಪೈಪ್​ ತುಂಬಿಕೊಂಡು ಹೋಗುತ್ತಿತ್ತು. ಆ ವೇಳೆ, ಸನಿಹದಲ್ಲೇ ಹೋಗುತ್ತಿದ್ದ ಕಾರ್​ ಮೇಲೆ ಪೈಪ್​ ಬಿದ್ದಿದೆ. ಬಿದ್ದ ರಭಸಕ್ಕೆ ಇಬ್ಬರು ಮಹಿಳೆಯರು ಓರ್ವ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇವರು ಯಾವ ಊರಿನವರು ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು,ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಬದಲಿ ಮಾರ್ಗವಾಗಿ ಉಪ್ಪಿನಂಗಡಿ ಹಾಗೂ ಕಡಬ ಮುಖಾಂತರ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.

ABOUT THE AUTHOR

...view details