ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

Three Coronavirus patients cure in Mangalore
ದ.ಕ ಜಿಲ್ಲೆಯಲ್ಲಿ ಇಬ್ಬರು ತಬ್ಲಿಘಿಗಳು ಸೇರಿದಂತೆ ಮೂವರು ಕೊರೊನಾ ಸೋಂಕಿತರು ಗುಣಮುಖ

By

Published : Apr 17, 2020, 8:18 PM IST

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

ಗುಣಮುಖರಾದ ಈ ಮೂವರಲ್ಲಿ ಇಬ್ಬರು ದೆಹಲಿಯ ನಿಜಾಮುದ್ದೀನ್​​ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡವರಾಗಿದ್ದು, ಮತ್ತೊಬ್ಬರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಉಡುಪಿ ಮೂಲದ ಮಹಿಳೆಯಾಗಿದ್ದಾರೆ.

ದೆಹಲಿ ನಿಜಾಮುದ್ದೀನ್ ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾಗಿದ್ದ ತುಂಬೆಯ 52 ವರ್ಷದ ವ್ಯಕ್ತಿ ಮತ್ತು ಉಳ್ಳಾಲ ತೊಕ್ಕೊಟ್ಟುವಿನ 43 ವರ್ಷದ ವ್ಯಕ್ತಿಗೆ ಏ. 4ರಂದು ಕೋವಿಡ್-19 ದೃಢಪಟ್ಟಿತ್ತು. ಉಡುಪಿ ಮೂಲದ 63 ವರ್ಷದ ಮಹಿಳೆಗೆ ಸಕ್ಕರೆ ಕಾಯಿಲೆ ಇದ್ದ ಕಾರಣ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮಹಿಳೆಗೆ ಏ. 4ರಂದು ಕೊರೊನಾ ದೃಢಪಟ್ಟಿತ್ತು.

ಮೂವರ ಗಂಟಲು ದ್ರವವನ್ನು ಮರು ಪರೀಕ್ಷೆಗೆ ಎರಡು ಬಾರಿ ಕಳುಹಿಸಿದಾಗ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಗುಣಮುಖರೆಂದು ಘೋಷಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details