ಪುತ್ತೂರು : ಆಟ ಆಡಲೆಂದು ನೀರಿನ ಟ್ಯಾಂಕ್ಗೆ ಇಳಿದ ಒಂದೇ ಕುಟುಂಬಕ್ಕೆ ಸೇರಿದ ಮೂವರು ಮಕ್ಕಳು ಸಾವಿಗೀಡಾದ ಘಟನೆ ಪಾಣಾಜೆ ಸಮೀಪದ ಉಡ್ಡಂಗಳ ಎಂಬಲ್ಲಿ ನಡೆದಿದೆ.
ನೀರಿನ ಟ್ಯಾಂಕ್ಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳ ದುರ್ಮರಣ - undefined
ಶಾಲೆಗೆ ರಜೆ ಇದ್ದಿದ್ದರಿಂದ ಇಂದು ಮೂವರು ಮಕ್ಕಳು ವಾಟರ್ ಟ್ಯಾಂಕ್ನಲ್ಲಿ ಆಟವಾಡಲೂ ಹೋಗಿದ್ದ ವೇಳೆ ಟ್ಯಾಂಕ್ನ ಒಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪುತ್ತೂರಲ್ಲಿ ನಡೆದಿದೆ.
ಮೃತ ಮಕ್ಕಳು
ಉಡ್ಡಂಗಳದ ಹರೀಶ್ ಮೂಲ್ಯ ಎಂಬವರ ಮಕ್ಕಳಾದ ವಿಶ್ಮಿತಾ (13), ಚೈತ್ರಾ (10) ಹಾಗೂ ಜಿತೇಶ್ (13) ಮೃತ ಮಕ್ಕಳು. ಮೃತಪಟ್ಟ ಮಕ್ಕಳೆಲ್ಲ ಬೆಟ್ಟಂಪಾಡಿಯ ಮಿತ್ತಡ್ಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಇರುವ ಹಿನ್ನಲೆಯಲ್ಲಿ ಆಟವಾಡಲು ಗ್ರಾಮ ಪಂಚಾಯತ್ನ ನೀರು ಸರಬರಾಜು ಟ್ಯಾಂಕ್ಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಟ್ಯಾಂಕ್ನ್ನು ಒಡೆದು ಹಾಕಿದ ಘಟನೆ ನಡೆದಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.