ಕರ್ನಾಟಕ

karnataka

ETV Bharat / state

ಮಕ್ಕಳು ಸಿಡಿಸಿದ ಪಟಾಕಿಗೆ ಮಂಗಳೂರಿನಲ್ಲಿ ಹೊತ್ತಿ ಉರಿದ ಬೋಟ್​​ಗಳು

ಲಂಗರು ಹಾಕಲಾಗಿದ್ದ ಬೋಟ್​ಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರಿನ ಬೆಂಗ್ರೆಯಲ್ಲಿ ನಡೆದಿದೆ.

Kn_Mng_0
ಬೋಟ್​ಗಳು ಬೆಂಕಿಗಾಹುತಿ

By

Published : Oct 28, 2022, 8:33 PM IST

Updated : Oct 28, 2022, 10:28 PM IST

ಮಂಗಳೂರು: ಮಕ್ಕಳು ಸಿಡಿಸಿದ ದೀಪಾವಳಿ ಪಟಾಕಿಯ ಕಿಡಿಯಿಂದ ನಗರದ ಬೆಂಗ್ರೆಯಲ್ಲಿ ಲಂಗರು ಹಾಕಲಾಗಿದ್ದ 3 ಬೋಟ್‌ಗಳಿಗೆ ಬೆಂಕಿ ತಗುಲಿ ಆಹುತಿಯಾದ ಘಟನೆ ಇಂದು ನಡೆದಿದೆ.

ಲಕ್ಷ ದ್ವೀಪಕ್ಕೆ ಕಾರ್ಗೋ ಸಾಗಿಸುವ ಬೋಟ್​​ಗಳನ್ನು ಮಂಗಳೂರಿನ ಬೆಂಗ್ರೆಯಲ್ಲಿ ರಿಪೇರಿ ಮಾಡಲು ಲಂಗರು ಹಾಕಲಾಗಿತ್ತು. ಇಲ್ಲಿ ಒಟ್ಟೊಟ್ಟಿಗೆ ಮೂರು ಬೋಟ್​​ಗಳು ಇದ್ದು, ಇದರ ಪಕ್ಕದಲ್ಲಿಯೆ ಮಕ್ಕಳು ಪಟಾಕಿ ಸಿಡಿಸಿದ್ದಾರೆ. ಆದರೆ ಪಟಾಕಿಯ ಕಿಡಿ ಬೋಟ್​​ನೊಳಗೆ ಬಿದ್ದು ಅನಾಹುತವಾಗಿದೆ.

ಮೂರು ಬೋಟ್​​ಗಳಲ್ಲಿ ಒಂದು ಬೋಟ್​​ನಲ್ಲಿ ಡೀಸೆಲ್ ತುಂಬಿತ್ತು. ಪಟಾಕಿಯ ಕಿಡಿಗೆ ಬೆಂಕಿ ಜ್ವಾಲೆಯಾಗಿ ಹಬ್ಬಿ ಪಕ್ಕದಲ್ಲಿದ್ದ ಎರಡು ಬೋಟ್​​ಗಳು ಆಹುತಿಯಾಗಿವೆ. ಸಂಜೆ 5 ಗಂಟೆಗೆ ತಗುಲಿದ ಬೆಂಕಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ನಂದಿಸಲಾಗಿದೆ. ಮಂಗಳೂರಿನ ಪಾಂಡೇಶ್ವರ, ಕದ್ರಿ ಅಗ್ನಿ ಶಾಮಕ ದಳದ ವಾಹನ, ಸ್ಥಳೀಯ ಕೈಗಾರಿಕಾ ಸಂಸ್ಥೆಗಳ ಹತ್ತು ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಲಂಗರು ಹಾಕಿದ ಬೋಟ್​ಗಳು ಬೆಂಕಿಗಾಹುತಿ

ಇದನ್ನೂ ಓದಿ:ಚಿಕ್ಕಮಗಳೂರು: ರಾಕೆಟ್​ ಪಟಾಕಿಯ ಕಿಡಿ ತಗುಲಿ ಮನೆ ಬೆಂಕಿಗಾಹುತಿ

Last Updated : Oct 28, 2022, 10:28 PM IST

ABOUT THE AUTHOR

...view details