ಬಂಟ್ವಾಳ(ದ.ಕ.): ಬಂಟ್ವಾಳ ತಾಲೂಕಿನ ಬಾಲಕಿಯೊಬ್ಬಳಿಗೆ ಲೈಂಗಿಕ ಶೋಷಣೆ ನೀಡಿದ ಮತ್ತು ಅತ್ಯಾಚಾರ ನಡೆಸಿದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆಯ ಪ್ರತ್ಯೇಕ ಪ್ರಕರಣ: ಮೂವರ ಬಂಧನ - bantwal minor rape case updates
ಬಂಟ್ವಾಳ ತಾಲೂಕಿನ ಬಾಲಕಿಯೊಬ್ಬಳಿಗೆ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ ನಡೆಸಿದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದ ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
![ಫರಂಗಿಪೇಟೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆಯ ಪ್ರತ್ಯೇಕ ಪ್ರಕರಣ: ಮೂವರ ಬಂಧನ Three arrested in minor girl rape case at bantwal](https://etvbharatimages.akamaized.net/etvbharat/prod-images/768-512-13561675-thumbnail-3x2-mng.jpg)
ನ.4 ಮತ್ತು 5ರಂದು ಬಾಲಕಿಯೊಬ್ಬಳು ಪ್ರತ್ಯೇಕ ದೂರುಗಳನ್ನು ನೀಡಿದ್ದು, ಮೊದಲ ದಿನ ನೀಡಿದ ದೂರಿನಲ್ಲಿ ಫರಂಗಿಪೇಟೆ ಎಂಬಲ್ಲಿ ಆಟೋ ಚಾಲಕನೊಬ್ಬ ಲೈಂಗಿಕ ಶೋಷಣೆ ನಡೆಸಿದ್ದಾಗಿ ತಿಳಿಸಿದ್ದಳು. ಅದರಂತೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಆರೋಪಿ ರಿಜ್ವಾನ್ ಎಂಬಾತನನ್ನು ಬಂಧಿಸಿದ್ದರು. ದೂರಿನ ಮೇರೆಗೆ ಪೊಕ್ಸೊ ಆಕ್ಟ್ ಅಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಅದೇ ಬಾಲಕಿ ಮರುದಿನ ತನ್ನ ತಾಯಿಯೊಂದಿಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಂಡವೊಂದನ್ನು ರಚಿಸಿ, ಕಾರ್ಯಾಚರಣೆ ನಡೆಸಿದ ಪೊಲೀಸರು ಅರ್ಕುಳದ ಮಹಮ್ಮದ್ ಖಾಸಿಂ, ಅಜ್ಮಲ್ ಹುಸೈನ್ ಎಂಬವರನ್ನು ಬಂಧಿಸಿದೆ.