ಕರ್ನಾಟಕ

karnataka

ETV Bharat / state

ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ಅಮಾನುಷ ಹಲ್ಲೆ: ಮೂವರ ಬಂಧನ - ಆಟೋದಲ್ಲಿ ಕರೆದೊಯ್ದು ದೊಣ್ಣೆಯಿಂದ ಹಲ್ಲೆ

ವ್ಯಕ್ತಿಯನ್ನು ಬಸ್​​ನಿಂದ ಇಳಿಸಿ, ಆಟೋದಲ್ಲಿ ಕರೆದೊಯ್ದು ದೊಣ್ಣೆಯಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ

three-arrested-in-assault-case-at-bantwala
ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ಅಮಾನುಷ ಹಲ್ಲೆ : ಮೂವರ ಬಂಧನ

By

Published : Dec 16, 2022, 8:06 AM IST

ಬಂಟ್ವಾಳ(ದಕ್ಷಿಣ ಕನ್ನಡ):ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಪ್ರಶ್ನಿಸಿ ಬಸ್ಸಿನಿಂದ ಇಳಿಸಿ, ಆಟೋದಲ್ಲಿ ಕರೆದೊಯ್ದು ದೊಣ್ಣೆಯಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಗುರುವಾರ ರಾತ್ರಿ ಮೂವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ ಇಸಾಕ್ (43) ಎಂಬುವರು ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಮನೋಹರ್, ಚೇತನ್ ಮತ್ತು ಕಿಶೋರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ. ಮೂವರು ಅಪರಿಚಿತರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿತ್ತು.

ಎರಡು ದಿನಗಳ ಹಿಂದೆ ಮೇಸ್ತ್ರಿ ಕೆಲಸ ಮಾಡುವ ಇಸಾಕ್ ಬಸ್​​ನಲ್ಲಿ ಮೂಡುಬಿದಿರೆಗೆ ಹೋಗುತ್ತಿದ್ದ ವೇಳೆ ಹಲ್ಲೆ ನಡೆದಿತ್ತು. ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿದ ಬ್ಯಾಗ್​​ ಹಿಡಿದುಕೊಂಡಿದ್ದೆ. ಆದರೆ, ಕುದ್ಕೋಳಿ ಬಳಿ ತಲುಪುತ್ತಿದ್ದಂತೆ ಬಸ್​​ನಲ್ಲಿದ್ದ ಓರ್ವ ವ್ಯಕ್ತಿ ತನಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಬಸ್​​ನಲ್ಲಿ ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಹೊರಗೆ ಕಳುಹಿಸಲು ಪ್ರಯತ್ನಿಸಿದ್ದಾರೆ. ಬಳಿಕ ಮೂವರು ಸೇರಿಕೊಂಡು ಬಸ್​ನಿಂದ ಕೆಳಗಿಳಿಸಿ, ಆಟೋದಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಇಸಾಕ್ ದೂರಿನಲ್ಲಿ ತಿಳಿಸಿದ್ದರು.

ಅಲ್ಲದೆ, ಇನ್ಮುಂದೆ ಬಸ್​ನಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಜನರು ಗುಂಪು ಸೇರುವುದನ್ನು ಕಂಡು ಸ್ಥಳದಿಂದ ಮೂವರೂ ಓಡಿದ್ದಾರೆ ಎಂದು ದೂರಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ​ ಸಿಬ್ಬಂದಿ ಮೂವರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ABOUT THE AUTHOR

...view details