ಮಂಗಳೂರು:ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ರಾಷ್ಟ್ರೀಯ ಹೆದ್ದಾರಿ 66ರ ಕದ್ರಿ ಪದುವಾ ಬಳಿ ಮಂಗಳೂರು ಕ್ರೈಂ ಪೊಲೀಸರು ಬಂಧಿಸಿ 2.50 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಬಂಧನ - ಮಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ,
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಂಗಳೂರು ಕ್ರೈಂ ಪೊಲೀಸರು ಬಂಧಿಸಿದ್ದಾರೆ.
![ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಬಂಧನ trying marijuana sale, Three arrested for trying marijuana sale, Three arrested for trying marijuana sale in Mangalore, trying marijuana sale news, ಗಾಂಜಾ ಮಾರಾಟಕ್ಕೆ ಯತ್ನ, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ, ಮಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ, ಗಾಂಜಾ ಮಾರಾಟಕ್ಕೆ ಯತ್ನ ಸುದ್ದಿ,](https://etvbharatimages.akamaized.net/etvbharat/prod-images/768-512-10146714-766-10146714-1609976721384.jpg)
ಮೂವರ ಬಂಧನ
ಮಹಾರಾಷ್ಟ್ರ ಮೂಲದ ಸಂತೋಷ ವಸಂತ ಅಹಿರೆ(29), ದಿಲೀಪ್ ನಾಗರಾವ್ ಗೋಡ್ಗಿ(41) ಹಾಗೂ ನಗರದ ಜೆಪ್ಪು ಮಾರ್ನಮಿಕಟ್ಟೆ ನಿವಾಸಿ ಇಮ್ರಾನ್ ಜುಬೇರ್(32) ಬಂಧಿತ ಆರೋಪಿಗಳು.
ಬಂಧಿತರಿಂದ 75 ಸಾವಿರ ರೂ. ಮೌಲ್ಯದ 2.50 ಕೆಜಿ ಗಾಂಜಾ, ಒಂದು ಆ್ಯಕ್ಟಿವಾ ಹೋಂಡಾ ವಾಹನ, 3 ಮೊಬೈಲ್ ಫೋನ್ಗಳು ಹಾಗೂ 1,030 ರೂ. ನಗದು ವಶಪಡಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,17,530 ರೂ. ಎಂದು ಅಂದಾಜಿಸಲಾಗಿದೆ.