ಕರ್ನಾಟಕ

karnataka

ETV Bharat / state

ಗೋಡಂಬಿ ಗಂಟಲಿನಲ್ಲಿ ಸಿಲುಕಿ ಮೂರೂವರೆ ವರ್ಷದ ಮಗು ಸಾವು - ಮಗು ಸಾವು

ಗೋಡಂಬಿ ತಿನ್ನುವಾಗ ಅದು ಗಂಟಲಿನಲ್ಲಿ ಸಿಲುಕಿ ಮೂರುವರೆ ವರ್ಷದ ಮಗುವೊಂದು ಮೃತಪಟ್ಟಿದೆ.

baby death
ಮಗು ಸಾವು

By

Published : Mar 11, 2021, 12:26 PM IST

ಪುತ್ತೂರು: ಗೋಡಂಬಿ ಬೀಜ ತಿನ್ನುತ್ತಿರುವಾಗ ಅದು ಗಂಟಲಲ್ಲಿ ಸಿಲುಕಿ ಮೂರೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ಸಾಲ್ಮರ ಎಂಬಲ್ಲಿ ನಡೆದಿದೆ.

ಸಾಲ್ಮರ ಉರಮಾಲ್ ನಿವಾಸಿ ಇಸಾಕ್ ಎಂಬವರ ಮೂರೂವರೆ ವರ್ಷದ ಗಂಡು ಮಗು ಬುಧವಾರ ಮಧ್ಯಾಹ್ನ ಮನೆಯಲ್ಲಿ ಗೋಡಂಬಿ ತಿನ್ನುತ್ತಿರುವಾಗ ಅದು ಗಂಟಲಲ್ಲಿ ಸಿಲುಕಿ, ಬಾಲಕ ಆಸ್ವಸ್ಥಗೊಂಡಿದ್ದ, ಕೂಡಲೇ ಪುತ್ತೂರಿನ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಲಾಗಿದೆ ಅಲ್ಲಿ ಚಿಕಿತ್ಸೆ ನೀಡದ ಕಾರಣ ನಂತರ ಮಂಗಳೂರಿಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ.

ಮಕ್ಕಳ ಕೈಗೆ ಯಾವುದೇ ತಿನಿಸು, ಆಟಿಕೆ ಕೊಡುವಾಗ ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯ. ಕೆಲದಿನಗಳ ಹಿಂದೆ ಸುಳ್ಯ ತಾಲೂಕಿನ ಏನೆಕಲ್​ ಉಯ್ಯಾಲೆಗೆ ಸಿಲುಕಿ ಮಗುವೊಂದು ದಾರುಣ ಅಂತ್ಯಕಂಡಿತ್ತು.

ABOUT THE AUTHOR

...view details