ಕರ್ನಾಟಕ

karnataka

ETV Bharat / state

ಮಂಗಳೂರು: ಯುವಕನಿಗೆ ಚೂರಿ ಇರಿದ ಮೂವರು ಆರೋಪಿಗಳು ಅಂದರ್​ - Surathkal, Mangalore

ಬೈಕ್​ನಲ್ಲಿ ತೆರಳುತ್ತಿದ್ದ ಯವಕನಿಗೆ ಚೂರಿ ಇರಿದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರಿನ ಸುರತ್ಕಲ್​ ಪೊಲೀಸರು ಬಂಧಿಸಿದ್ದಾರೆ.

dsd
ಯುವಕನಿಗೆ ಚೂರಿ ಇರಿದ ಮೂವರು ಆರೋಪಿಗಳು ಅಂದರ್​

By

Published : Jan 28, 2021, 7:05 PM IST

ಮಂಗಳೂರು: ಸುರತ್ಕಲ್​ನ ಗಣೇಶಪುರದಲ್ಲಿ ಯುವಕನಿಗೆ ಚೂರಿ ಇರಿದ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್​ನ ಶ್ರೀನಿವಾಸ (20), ರಾಜು (20), ಅಭಿಷೇಕ್ (18) ಬಂಧಿತರು. ನಿನ್ನೆ ರಾತ್ರಿ ಬೈಕ್​ನಲ್ಲಿ ಹೋಗುತ್ತಿದ್ದ ಜಾಬೀರ್ ಎಂಬ ಯುವಕನನ್ನು ತಡೆದು ಈ ದುಷ್ಕರ್ಮಿಗಳು ಚೂರಿಯಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಓದಿ:ಸುರತ್ಕಲ್​ನಲ್ಲಿ ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು

ಗಾಯಾಳು ಜಾಬೀರ್​ನನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಈ ಹಿಂದೆ ಬಂಧಿತ ಶ್ರೀನಿವಾಸ್​ ವಿರುದ್ಧ 3 ಮತ್ತು ರಾಜು ವಿರುದ್ಧ 2 ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details