ಕರ್ನಾಟಕ

karnataka

ETV Bharat / state

ಟಿಪ್ಪು ವಿರುದ್ಧ ಮತ್ತೆ ಖಡ್ಗ ಜಳಪಿಸಿದ ಚಿದಾನಂದ ಮೂರ್ತಿ... ಟಿಪ್ಪು ವೈಭವಿಕರಿಸುವವರಿಗೆ ಸತ್ಯ ಬೇಕಾಗಿಲ್ಲ ಎಂದ ಚಿಮು - ಮಂಗಳೂರು ಲಿಟರರಿ ಫೌಂಡೇಶನ್​​ನ ಆಶ್ರಯದಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮ

ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಜೀವನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಡಾ.ಎಂ.ಚಿದಾನಂದ ಮೂರ್ತಿ, ರಾಜ್ಯ ಸರ್ಕಾರ ಟಿಪ್ಪು ಜಯಂತಿ ನಿಷೇಧದ ಬಗ್ಗೆ ಕಥಗೊಂಡ ಕ್ರಮ ಶ್ಲಾಘನೀಯವಾದುದು. ಟಿಪ್ಪುವನ್ನು ಸಾಕಷ್ಟು ಜನ ವೈಭವೀಕರಣ ಮಾಡಿದ್ದಾರೆ. ಟಿಪ್ಪುವಿನನ್ನು ವೈಭವೀಕರಿಸುವವರಿಗೆ ಅದರ ಬಗ್ಗೆ ಯಾವುದೇ ಸತ್ಯವೂ ಬೇಕಾಗಿರುವುದಿಲ್ಲ ಎಂದು ಕುಟುಕಿದ್ದಾರೆ.

Dr.M.Chidananda Murthy
ಡಾ.ಎಂ.ಚಿದಾನಂದ ಮೂರ್ತಿ

By

Published : Nov 29, 2019, 3:32 PM IST

ಮಂಗಳೂರು:ಟಿಪ್ಪು ಜಯಂತಿ ರದ್ದು ಪಡಿಸಿ ಕರ್ನಾಟಕ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಈ ಹಿಂದೆ ಟಿಪ್ಪುವನ್ನು ವೈಭವಿಕರಿಸಲಾಗುತ್ತಿತ್ತು. ಟಿಪ್ಪುವನ್ನು ವೈಭವೀಕರಿಸುವವರಿಗೆ ಯಾವ ಸತ್ಯವೂ ಬೇಕಾಗಿಲ್ಲ ಎಂದು ಹಿರಿಯ ಸಂಶೋಧಕ, ಸಾಹಿತಿ ಎಂ.ಚಿದಾನಂದ ಮೂರ್ತಿ ಹೇಳಿದರು.

ಮಂಗಳೂರು ಲಿಟರರಿ ಫೌಂಡೇಶನ್​​ನ ಆಶ್ರಯದಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಜೀವನ ಸಾಧನೆ ಪ್ರಶಸ್ತಿ ಸ್ವೀಕರಿಸಿ, ಸತ್ಯಂ ಶೋಧಂ ನಿರ್ಭಿತಂ ಎಂಬ ತಮ್ಮ ಕೃತಿ ಬಿಡುಗಡೆ ಬಳಿಕ ಮಾತನಾಡಿದ ಅವರು, ಟಿಪ್ಪುವನ್ನು ವೈಭವಿಕರಸಿ ತಮ್ಮನ್ನು ತಾವು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಟಿಪ್ಪು ಕರಾವಳಿ ಪ್ರದೇಶದಲ್ಲಿ ಮೀರ್ ಹುಸೇನ್ ಗೆ ಹಿಂದುಗಳನ್ನು ಕೊಲ್ಲಲು ಆದೇಶ ನೀಡಿದ್ದನು. ಯಾವುದೇ ಅನ್ಯಧರ್ಮವನ್ನು ನಾಶ ಮಾಡಲು ಹೇಳುವುದು ಖಂಡನೀಯ ಎಂದರು.

ಡಾ.ಎಂ.ಚಿದಾನಂದ ಮೂರ್ತಿ

ಭಾರತೀಯ ಸಂಸ್ಕೃತಿ ಶ್ರೀಮಂತವಾದುದು, ಅನ್ಯದೇಶಗಳ ಮೇಲೆ ನಮ್ಮ ಸಂಸ್ಕೃತಿ ಅಕ್ರಮಣ, ‌ಕ್ರೌರ್ಯಗಳನ್ನು ಎಂದಿಗೂ ಮಾಡಿಲ್ಲ. ಹೊರದೇಶದವರು ಭಾರತ ದೇಶದ ಮೇಲೆ ಮಾಡಿದ ಅಕ್ರಮಗಳು ಭೌತಿಕ ಮಾತ್ರವಲ್ಲ, ಮಾನಸಿಕ ಅಕ್ರಮವು ಆಗಿದೆ. ಹಿಂದು ಅಲ್ಲದವರನ್ನು ಕೊಲ್ಲಬೇಕೆಂದು ಯಾವತ್ತೂ ಹೇಳಿಲ್ಲ. ಆದರೆ ಹೊರದೇಶದ ಅನ್ಯಮತಗಳು ತಮ್ಮದಲ್ಲದ ಮತದ ವಿರುದ್ಧ ಸಮರ ಸಾರಿದವು ಎಂದರು.

ABOUT THE AUTHOR

...view details