ಕರ್ನಾಟಕ

karnataka

ETV Bharat / state

ಹೋಮದ ಹೊಗೆ ಹಾಕಿ ಕೈಚಳಕ.. ಕಳ್ಳತನ ಮಾಡಿ ಚಾಲಾಕಿ ಪರಾರಿ - ವಿಡಿಯೋ - dakshina kannada news

ಉಳ್ಳಾಲದ ಕೋಟೆಕಾರು ಬಳಿ ಕಳ್ಳನು ಗೃಹಪ್ರವೇಶದ ಮನೆಗೆ ನುಗ್ಗಿ ವಾಸ್ತು ಹೋಮದ ಹೊಗೆಯ ಲಾಭ ಪಡೆದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

thief-who-took-advantage-of-the-smoke-and-robbed-the-house
ಹೋಮದ ಹೊಗೆಯ ಲಾಭ ಪಡೆದು ಕಳ್ಳತನ ನಡೆಸಿದ ಖತರ್ನಾಕ್​ ಕಳ್ಳ

By

Published : Dec 21, 2022, 4:04 PM IST

Updated : Dec 21, 2022, 4:39 PM IST

ಹೋಮದ ಹೊಗೆ ಹಾಕಿ ಕೈಚಳಕ.. ಕಳ್ಳತನ ಮಾಡಿ ಚಾಲಾಕಿ ಪರಾರಿ

ಉಳ್ಳಾಲ(ದಕ್ಷಿಣ ಕನ್ನಡ): ಗೃಹಪ್ರವೇಶದ ಮನೆಯಲ್ಲಿ ಪೂಜೆ ಸಂದರ್ಭದಲ್ಲಿ ಕೋಣೆಗೆ ನುಗ್ಗಿ ನಗದು ಮತ್ತು ಮೊಬೈಲ್​ ದೋಚಿ ಪರಾರಿಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ.

ಡಿ.10 ರಂದು ರಾತ್ರಿ ಸ್ಮಿತಾ-ದಾಮೋದರ್ ದಂಪತಿ ಅಡ್ಕಬೈಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಮನೆಯಲ್ಲಿ ವಾಸ್ತು ಹೋಮ ಕಾರ್ಯಕ್ರಮ ನೆರವೇರಿಸಿದ್ದರು, ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ ಹೋಮದ ಹೊಗೆಯ ಲಾಭ ಪಡೆದು ಕೋಣೆಗೆ ನುಗ್ಗಿ ಬ್ಯಾಗ್​ನಲ್ಲಿದ್ದ 15 ಸಾವಿರ ನಗದು, ಮೊಬೈಲ್​ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಕದ್ದು ಹೊರ ನಡೆದಿದ್ದಾನೆ.

ಕಳ್ಳ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರ ನಡೆಯುವ ದೃಶ್ಯ ಕ್ಯಾಮರಮ್ಯಾನ್​ ಸೆರೆಹಿಡಿದಿರುವ ವಿಡಿಯೋದಲ್ಲಿ ಸೆರೆಯಾಗಿದೆ.

ಅದೇ ದಿನ ಮಧ್ಯರಾತ್ರಿ ಅಲ್ಲೇ ಸಮೀಪದ ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬುವವರ ಮನೆಗೂ ರಾತ್ರಿ ಕನ್ನ ಹಾಕಿದ್ದ ಖದೀಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲನ್ನು ಒಡೆದು ಕೋಣೆಯೊಳಗಿನ ಕಪಾಟಿನಲ್ಲಿದ್ದ 11,000 ರೂ. ನಗದು, 32 ಗ್ರಾಂ ಚಿನ್ನ, 8 ಬೆಳ್ಳಿ ನಾಣ್ಯ, ಮತ್ತು 3 ರೇಡೋ ವಾಚ್​ಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾನೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಡಿಯೋ ಫೂಟೇಜ್ ಆಧಾರದಲ್ಲಿ ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನು ಓದಿ:ಮೆಕ್ಕಾಗೆ ತೆರಳಿದ್ದ ಕಡಬ ಮೂಲದ ಯಾತ್ರಾರ್ಥಿ ಹೃದಯಾಘಾತದಿಂದ ಸಾವು

Last Updated : Dec 21, 2022, 4:39 PM IST

ABOUT THE AUTHOR

...view details