ಕರ್ನಾಟಕ

karnataka

ETV Bharat / state

ಜಮಾಲಿಯಾ ಜುಮ್ಮಾ ಮಸೀದಿಯಲ್ಲಿ‌ ಅವ್ಯವಹಾರ ನಡೆದಿಲ್ಲ : ಯಾಕೂಬ್ ಅಹ್ಮದ್ ಸಲಾಂ - ಜಮಾಲಿಯಾ ಜುಮ್ಮಾ ಮಸೀದಿಯಲ್ಲಿ‌ ಅವ್ಯವಹಾರ ನಡೆದಿಲ್ಲ

ಅಬ್ದುಲ್ ಅಝೀಜ್ ಅವರು ಈ ಬಗ್ಗೆ ಪ್ರಶ್ನೆ ಎತ್ತಿರುವ ಬಗ್ಗೆ ನಮ್ಮ ಆಕ್ಷೇಪಗಳಿಲ್ಲ. ಅದು ಅವರ ಹಕ್ಕು‌. ಈ ಸಂಶಯಗಳ ವಿರುದ್ಧ ಅವರು ಕೇಸನ್ನೂ ದಾಖಲಿಸಿದ್ದರು. ಈ ಬಗ್ಗೆ ಮಸೀದಿಯ ಅಧ್ಯಕ್ಷರ ಪರವಾಗಿಯೇ ತೀರ್ಪು ಬಂದಿದ್ದು, ನಮ್ಮಲ್ಲಿ ಅದಕ್ಕೆ ಬೇಕಾಗಿರುವ ದಾಖಲೆಗಳು ಇವೆ..

Yākūb ahmad salam
ಯಾಕೂಬ್ ಅಹ್ಮದ್ ಸಲಾಂ

By

Published : Nov 30, 2020, 7:50 PM IST

ಮಂಗಳೂರು : ಗುರುಪುರ ಬೈಲುಪೇಟೆಯ ಜಮಾಲಿಯಾ ಜುಮ್ಮಾ ಮಸೀದಿ ಜಮಾಅತ್‌ನಲ್ಲಿ‌ ಯಾವುದೇ ಹಣಕಾಸಿನ ಅವ್ಯವಹಾರ ನಡೆದಿಲ್ಲ. ಅಬ್ದುಲ್ ಅಝೀಜ್ ಅವರ ಆರೋಪ ನಿರಾಧಾರ ಎಂದು ಜಮಾಲಿಯಾ ಜುಮ್ಮಾ ಮಸೀದಿ ಜಮಾಅತ್‌ನ ಮತ್ತೋರ್ವ ಸದಸ್ಯ ಯಾಕೂಬ್ ಅಹ್ಮದ್ ಸಲಾಂ ಹೇಳಿದ್ದಾರೆ.

ಜಮಾಲಿಯಾ ಜುಮ್ಮಾ ಮಸೀದಿಯಲ್ಲಿ‌ ಅವ್ಯವಹಾರ ನಡೆದಿಲ್ಲ : ಯಾಕೂಬ್ ಅಹ್ಮದ್ ಸಲಾಂ

ನಗರದಲ್ಲಿ ಮಾತನಾಡಿದ ಅವರು, ಜಮಾಲಿಯಾ ಜುಮ್ಮಾ ಮಸೀದಿ ಜಮಾಅತ್‌ನ ಆಡಳಿತ ಹಾಗೂ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಅಬ್ದುಲ್ ಅಝೀಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

ನಮ್ಮ ಮಸೀದಿಯ ಎಲ್ಲಾ ಆಡಳಿತ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ಬಗ್ಗೆ ನಾವು ಸಮಯಕ್ಕೆ ಸರಿಯಾಗಿ ಲೆಕ್ಕಪತ್ರವನ್ನು ವಕ್ಫ್ ಬೋರ್ಡ್‌ಗೆ ಕಳಿಸಿ ಮೊಹರನ್ನು ಪಡೆದಿದ್ದೇವೆ.

ಅಬ್ದುಲ್ ಅಝೀಜ್ ಅವರು ಈ ಬಗ್ಗೆ ಪ್ರಶ್ನೆ ಎತ್ತಿರುವ ಬಗ್ಗೆ ನಮ್ಮ ಆಕ್ಷೇಪಗಳಿಲ್ಲ. ಅದು ಅವರ ಹಕ್ಕು‌. ಈ ಸಂಶಯಗಳ ವಿರುದ್ಧ ಅವರು ಕೇಸನ್ನೂ ದಾಖಲಿಸಿದ್ದರು. ಈ ಬಗ್ಗೆ ಮಸೀದಿಯ ಅಧ್ಯಕ್ಷರ ಪರವಾಗಿಯೇ ತೀರ್ಪು ಬಂದಿದ್ದು, ನಮ್ಮಲ್ಲಿ ಅದಕ್ಕೆ ಬೇಕಾಗಿರುವ ದಾಖಲೆಗಳು ಇವೆ ಎಂದರು.

ಇದೀಗ ಅಬ್ದುಲ್ ಅಝೀಜ್ ಹಾಗೂ ಅವರ ಅಳಿಯನ ಮೇಲೆ ಯಾರೋ ದುಷ್ಕರ್ಮಿಗಳು ದಾಳಿ‌ ನಡೆಸಿ ಹಲ್ಲೆ ನಡೆಸಿದ್ದು, ಈ ದಾಳಿಯನ್ನು ಜಮಾಅತ್‌ಗೆ ಒಳಪಟ್ಟ ನಾವು ಖಂಡಿಸುತ್ತೇವೆ. ಇದರ ಬಗ್ಗೆ ಪೊಲೀಸ್ ಇಲಾಖೆ ಕೆಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದೆ.

ನಮ್ಮ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಯಾವುದೇ ಸದಸ್ಯರು ಈ ಕೃತ್ಯದಲ್ಲಿ ಭಾಗವಹಿಸಿದ್ರೆ ನಾವು ಅವರಿಗೆ ಬೆಂಬಲಿಸಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಿ, ಆರೋಪಿಗಳನ್ನು ತಕ್ಷಣ ಬಂಧಿಸಲಿ. ಪೊಲೀಸ್ ಇಲಾಖೆಗೂ ಈ ಬಗ್ಗೆ ಸಹಕಾರ ನೀಡಲು ನಮ್ಮ ಮಸೀದಿಯ ಜಮಾಅತ್‌ನ ಸರ್ವ ಸದಸ್ಯರೂ ಸಿದ್ಧರಿದ್ದೇವೆ ಎಂದು ಹೇಳಿದರು.

ABOUT THE AUTHOR

...view details