ಕರ್ನಾಟಕ

karnataka

ETV Bharat / state

10 ತಿಂಗಳ ಶಿಷ್ಯವೇತನ ಬಿಡುಗಡೆಗೆ ವೆನ್ಲಾಕ್ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳ ಆಗ್ರಹ - mangalore wenlock hospital latest news

ವೆನ್ಲಾಕ್ ಆಸ್ಪತ್ರೆಯಲ್ಲಿ ಗೃಹ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 51ಕ್ಕೂ ಹೆಚ್ಚು ಅಧಿಕ ವೈದ್ಯ ವಿದ್ಯಾರ್ಥಿಗಳಿಗೆ 10 ತಿಂಗಳಿನಿಂದ ಶಿಷ್ಯವೇತನ ದೊರಕಿಲ್ಲವೆಂದು ಇಂಟರ್ನ್‌ಶಿಪ್ ಕೌನ್ಸಿಲ್​ನ ಅಧ್ಯಕ್ಷ ಚಿರಂತನ್ ಸುಹೃದ್ ಆರೋಪಿಸಿದ್ದಾರೆ.

There are no 10 months scholarships for medical students of Wenlock Hospital
ವೆನ್ಲಾಕ್ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳಿಗಿಲ್ಲ 10 ತಿಂಗಳ ಶಿಷ್ಯವೇತನ...!

By

Published : Jan 26, 2020, 7:23 PM IST

ಮಂಗಳೂರು:ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಗೃಹ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 51ಕ್ಕೂ ಹೆಚ್ಚು ಅಧಿಕ ವೈದ್ಯ ವಿದ್ಯಾರ್ಥಿಗಳಿಗೆ 10 ತಿಂಗಳಿನಿಂದ ಶಿಷ್ಯವೇತನ ದೊರಕಿಲ್ಲ.

ಈ ಬಗ್ಗೆ ಶಿಷ್ಯವೇತನ ಬಿಡುಗಡೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಡಿ. 24ರಂದು ಲಿಖಿತ ಆದೇಶ ನೀಡಿದ್ದರೂ, ಇದುವರೆಗೆ ಶಿಷ್ಯ ವೇತನ ದೊರಕಿಲ್ಲ ಎಂದು ಇಂಟರ್ನ್‌ಶಿಪ್ ಕೌನ್ಸಿಲ್​ನ ಅಧ್ಯಕ್ಷ ಚಿರಂತನ್ ಸುಹೃದ್ ಆರೋಪಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳಿಗಿಲ್ಲ 10 ತಿಂಗಳ ಶಿಷ್ಯವೇತನ...!

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯೇ ಶಿಷ್ಯವೇತನ ಪಾವತಿಸುತ್ತಿತ್ತು. ಆದರೆ 2019-2020ನೇ ಸಾಲಿನಿಂದ ವೆನ್ಲಾಕ್ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ (ಎಆರ್‌ಎಸ್) ನಿಧಿಯಿಂದ ಶಿಷ್ಯವೇತನ ಪಾವತಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ರಾಜೇಶ್ವರಿದೇವಿ ಅವರಿಗೆ ಮನವಿ ನೀಡಿ, ಶಿಷ್ಯವೇತನ ಪಾವತಿಸುವಂತೆ ವಿನಂತಿಸಿದಾಗ ಎಆರ್‌ಎಸ್ ಖಾತೆಯಲ್ಲಿ ಹಣ ಇಲ್ಲ ಎಂಬ ಕಾರಣ ನೀಡಿ ಶಿಷ್ಯವೇತನ ನೀಡಿಲ್ಲ. ಆದರೆ, ಆರ್‌ಟಿಐ ಮೂಲಕ ಮಾಹಿತಿ ಪಡೆದಾಗ ಎಆರ್‌ಎಸ್ ಖಾತೆಯಲ್ಲಿ 2.75 ಕೋಟಿಗೂ ಅಧಿಕ ಉಳಿಕೆ ಮೊತ್ತ ಇರುವುದು ಬಹಿರಂಗವಾಗಿದೆ. ಮುಂದಿನ ನಾಲ್ಕು ದಿನದೊಳಗೆ ಶಿಷ್ಯವೇತನ ನೀಡದೇ ಇದ್ದಲ್ಲಿ ಮುಂದಿನ ಘಟನೆಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಚಿರಂತನ್ ಸುಹೃದ್ ಎಚ್ಚರಿಸಿದರು.

ನಮಗೆ ತಿಂಗಳಿಗೆ 20 ಸಾವಿರ ರೂ. ಶಿಷ್ಯ ವೇತನ ನಿಗದಿಯಾಗಿತ್ತು. ಆದರೆ ಜ.19 ತಾರೀಖಿಗೆ ನಮ್ಮ ಸೇವೆ 10 ತಿಂಗಳು ಕಳೆಯಿತು. ಮಣಿಪಾಲ ವಿ.ವಿಯ ಕೆಎಂಸಿ ಹಾಗೂ ಸರ್ಕಾರದ ನಡುವಿನ ಒಪ್ಪಂದದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ದುಡಿಯುತ್ತಿದ್ದರೂ ನಮಗೆ ಕಳೆದ 10 ತಿಂಗಳಿನಿಂದ ಯಾವುದೇ ಶಿಷ್ಯವೇತನ ಬಂದಿಲ್ಲ. ಸರ್ಕಾರಿ ಕೋಟಾದಡಿ ಮೆರಿಟ್ ಸೀಟ್ ಪಡೆದು ಕಷ್ಟಪಟ್ಟು ಓದಿ ನಾವು ಪದವಿ ಪಡೆದಿದ್ದೇವೆ. ನಮ್ಮ ಮೊದಲ ವರ್ಷದ ಶಿಷ್ಯವೇತನವೇ ದೊರೆಯದಿದ್ದಲ್ಲಿ ನಾವು ಹೇಗೆ ಬದುಕುವುದು. ಸರ್ಕಾರ ತಕ್ಷಣ ಈ ಬಗ್ಗೆ ಗಮನ ಗಮನಹರಿಸಿ, ಶಿಷ್ಯವೇತನ ಬಿಡುಗಡೆಗೊಳಿಸಬೇಕು ಎಂದು ಚಿರಂತನ್ ಸುಹೃದ್ ಆಗ್ರಹಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿ ಸೇರಿದಂತೆ ಕಳೆದ 6 ತಿಂಗಳಿನಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಶಿಷ್ಯವೇತನ ಪಾವತಿ ಮಾಡುವಂತೆ ಮನವಿ ಸಲ್ಲಿಸಿದ್ದೇವೆ. ಎಲ್ಲರೂ ಒಪ್ಪಿಗೆ ನೀಡಿದ್ದಾರೆ ವಿನಃ ಇದೂವರೆಗೆ ಶಿಷ್ಯವೇತನ ಪಾವತಿಯಾಗಿಲ್ಲ ಎಂದು ಅವರು ಅಳಲು ತೋಡಿಕೊಂಡರು. ಈ ವೇಳೆ ಗೃಹವೈದ್ಯರಾದ ಶ್ರೀಲಕ್ಷ್ಮಿ, ಸಿದ್ಧಾರ್ಥ ಶಂಕರ್, ನಿಹಾಲ್, ಕುಲದೀಪ್ ಉಪಸ್ಥಿತರಿದ್ದರು.

ABOUT THE AUTHOR

...view details