ಮಂಗಳೂರು : ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಿಬ್ಬಂದಿಗಳ ಭರ್ತಿಗೆ ಸರಕಾರಗಳು ಆಸಕ್ತಿ ತೋರಿಸುತ್ತಿಲ್ಲ ಎಂಬ ಆಪಾದನೆ ಬಹಳ ಸಮಯದಿಂದ ಇದೆ. ಅದೇ ರೀತಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು ಸಿಬ್ಬಂದಿಗಳ ನೇಮಕಾತಿಗೆ ಎದುರು ನೋಡುತ್ತಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿಯಿವೆ ಹಲವು ಹುದ್ದೆಗಳು - ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿಯಿವೆ ಹಲವು ಹುದ್ಡೆಗಳು
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು ಸಿಬ್ಬಂದಿಗಳ ನೇಮಕಾತಿಗೆ ಎದುರು ನೋಡುತ್ತಿದೆ.
![ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿಯಿವೆ ಹಲವು ಹುದ್ದೆಗಳು There are many vacancies in Mangalore University](https://etvbharatimages.akamaized.net/etvbharat/prod-images/768-512-9433617-thumbnail-3x2-giri.jpg)
ಭೋಧಕೇತರ ಸಿಬ್ಬಂದಿಗಳಲ್ಲಿ ಹುದ್ದೆಗಳು ಹಲವು ಖಾಲಿ ಇದೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಂಜೂರಾಗಿರುವ 547 ಹುದ್ದೆಗಳಲ್ಲಿ 256 ಹುದ್ದೆಗಳು ಖಾಲಿ ಇದೆ. ವಿಶ್ವವಿದ್ಯಾನಿಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಪೂರ್ಣವಾಗದೆ ಕಾರ್ಯಚಟುವಟಿಕೆಗೆ ತುಂಬಾ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಮತ್ತು ಕಚೇರಿ ನಿರ್ವಹಣೆಗೆ ಈ ಕೊರತೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಖಾಲಿಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಚಿಂತಿಸುವುದೇ ಎಂಬುದನ್ನು ಕಾದುನೋಡಬೇಕಾಗಿದೆ.
ಬೋಧಕ ಸಿಬ್ಬಂದಿಗಳಲ್ಲಿ 273 ಹುದ್ದೆಗಳು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಂಜೂರಾಗಿದ್ದು ಇದರಲ್ಲಿ 177 ಹುದ್ದೆಗಳು ನೇಮಕವಾಗಿದ್ದರೆ 96 ಖಾಲಿ ಇವೆ. ಪ್ರೊಫೆಸರ್ 20, ಅಸೋಸಿಯೇಟ್ ಪ್ರೊಫೆಸರ್ 22, ಅಸಿಸ್ಟೆಂಟ್ ಪ್ರೊಫೆಸರ್ 54 ಹುದ್ದೆಗಳು ಖಾಲಿ ಇವೆ.