ಕರ್ನಾಟಕ

karnataka

ETV Bharat / state

15 ದಿನದ ಹಿಂದೆಯಷ್ಟೇ ಬಿಡುಗಡೆ... ಕೆಲಸ ಇಲ್ಲವೆಂದು ಮತ್ತೆ ಕಳ್ಳತನ... ಮತ್ತೆ ಜೈಲು! - ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಗದು ಕಳ್ಳತನ

15 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದ ವ್ಯಕ್ತಿ ಮತ್ತೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

Accused Mohammad Ikbal
Accused Mohammad Ikbal

By

Published : Aug 9, 2020, 9:35 PM IST

ಬಂಟ್ವಾಳ: ಬಿ. ಮೂಡ ಗ್ರಾಮದ ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಣ ಕದ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿ. ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಇಕ್ಕ ಯಾನೆ ಮಹಮ್ಮದ್ ಇಕ್ಬಾಲ್ (51) ಬಂಧಿತ ಆರೋಪಿ. ಈತನಿಂದ 1100 ರೂ. ನಗದು, ಒಂದು ಟಾರ್ಜ್, ಸ್ಕ್ರೂಡ್ರೈವರ್, ಕಬ್ಬಿಣದ ರಾಡ್, ಬ್ಲೇಡ್, ಮೀನಿಗೆ ಹಾಕುವ ಗಾಳ, ನೈಲಾನ್ ಹಗ್ಗ ಹೊಂದಿದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆ. 7 ರಂದು ಮೊಂಡಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ಸಂಘದ ಕಾರ್ಯದರ್ಶಿ ರಾಜೀವಿ ಮಲ್ಲಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್​​ಐ ಕಲೈಮಾರ್ ಮತ್ತು ಅವರ ಸಿಬ್ಬಂದಿ ವರ್ಗ ಗಸ್ತಿನಲ್ಲಿದ್ದ ವೇಳೆ ಅಮ್ಟಾಡಿ ಗ್ರಾಮದ ಗೋರೆಮಾರ್ ಬಳಿ ಬ್ಯಾಗ್ ಹಿಡಿದು ಹೋಗುವಾಗ ಪೊಲೀಸ್ ವಾಹನ ಕಂಡು ಮರೆಮಾಚಲು ಯತ್ನಿಸಿದ್ದ ಎನ್ನಲಾಗಿದೆ.

ಅನುಮಾನಗೊಂಡ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, 15 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದು, ಊರಿನಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ಮತ್ತೆ ಕಳವು ಮಾಡಿಕೊಂಡು ಮೀನು ಹಿಡಿಯಲು ಹೊರಟಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಒಂದು ದಿನದ ಹಿಂದೆ ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಗದು ಹಣವನ್ನು ಕಳವು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಎಸ್​ಐ ಕಲೈಮಾರ್ ಜೊತೆ ಸಿಬ್ಬಂದಿ ಸುರೇಶ, ಲೋಕೇಶ, ಉಸ್ಮಾನ ವಾಲಿಕಾರ, ಶ್ರೀಕಾಂತ, ಬಸಪ್ಪ, ವಿವೇಕ, ಕುಮಾರ ಭಾಗವಹಿಸಿದ್ದರು.

ABOUT THE AUTHOR

...view details