ಕರ್ನಾಟಕ

karnataka

ETV Bharat / state

ಉಳ್ಳಾಲ.. ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ಒಡೆದು ಕಳವು - ಈಟಿವಿ ಭಾರತ ಕನ್ನಡ

ಮಸೀದಿಯೊಂದಕ್ಕೆ ನುಗ್ಗಿ ಕಾಣಿಕೆ ಡಬ್ಬಿಗಳನ್ನು ಒಡೆದು ಕಳವು ಮಾಡಿರುವ ಘಟನೆ ಅರ್ಕಾನ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದಿದೆ.

Kn_mng_ulla
ಮಸೀದಿಗೆ ನುಗ್ಗಿ ಕಾಣಿಕೆಡಬ್ಬಿ ಒಡೆದು ಕಳವು ಮಾಡಿದ ಕಳ್ಳರು

By

Published : Nov 2, 2022, 5:35 PM IST

ಉಳ್ಳಾಲ: ಮಸೀದಿಯೊಂದಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಗಳನ್ನು ಒಡೆದು ದೋಚಿ ಪರಾರಿಯಾಗಿರುವ ಘಟನೆ ಇಂದು ಬೆಳಗಿನ ಜಾವ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದಿದೆ.

ಮಸೀದಿ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾರೆ. ಮಸೀದಿ ವಠಾರದಲ್ಲಿ ಅಳವಡಿಸಿದ್ದ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ಕಳ್ಳರು ಹಣವನ್ನು ದೋಚಿದ್ದಾರೆ. ಇನ್ನು ಕಳ್ಳರು ಕೃತ್ಯ ಎಸಗುವ ಮುನ್ನ ಅಲ್ಲೆ ಇದ್ದಂತಹ ಶಾಲೆಯೊಂದರಲ್ಲಿ ಪಾರ್ಟಿ ಮಾಡಿರುವುದಾಗಿ ಶಂಕಿಸಲಾಗಿದ್ದು, ಸ್ಥಳಗಳಲ್ಲಿ ಮುಖಗವಚ, ಲೈಟರ್​ ಸೇರಿದಂತೆ ಅಡುಗೆ ಸಾಮಗ್ರಿಗಳು ಪತ್ತೆಯಾಗಿವೆ.

ಇನ್ನು ಘಟನಾ ಸ್ಥಳಕ್ಕೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:4ರ ಬಾಲೆಯ ಅಪಹರಿಸಿ ಅತ್ಯಾಚಾರ: 16 ಗಂಟೆಗಳ ಬಳಿಕ ಕಬ್ಬಿನ ಗದ್ದೆಯಲ್ಲಿ ಸಂತ್ರಸ್ತೆ ಪತ್ತೆ

ABOUT THE AUTHOR

...view details