ಕರ್ನಾಟಕ

karnataka

ETV Bharat / state

ಮಂಗಳೂರು: ಎರಡು ದೈವಸ್ಥಾನಗಳಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ - ಎರಡು ದೈವಸ್ಥಾನಗಳಿಗೆ ನುಗ್ಗಿ ನಗ-ನಗದು ಕಳವು

ಕುಳಾಯಿ ಹೊಸಬೆಟ್ಟುವಿನ ಹೊಯಿಗೆ ದಿಡ್ಡು ಎಂಬಲ್ಲಿನ ಕಲ್ಲುರ್ಟಿ, ಕಲ್ಕುಡ ಹಾಗೂ ವರ್ತೇಶ್ವರಿ ಜೋಡು ಪಂಜುರ್ಲಿ ದೈವಸ್ಥಾನದಲ್ಲಿ ಜ.8 ರ ರಾತ್ರಿ ಸಮಯದಲ್ಲಿ ಕಳವಾಗಿದೆ ಎಂದು ದೂರು ದಾಖಲಾಗಿದೆ.

Theft at both temples in Mangalore
ಎರಡು ದೈವಸ್ಥಾನಗಳಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ

By

Published : Jan 10, 2021, 10:01 AM IST

ಮಂಗಳೂರು: ಎರಡು ದೈವಸ್ಥಾನಗಳ ಬಾಗಿಲು ಒಡೆದು ಬೆಳ್ಳಿಯ ಮೂರ್ತಿಗಳು ಹಾಗೂ ದೈವದ ಸೊತ್ತುಗಳನ್ನು ಕಳವುಗೈದಿರುವ ಪ್ರಕರಣ ನಗರದ ಸುರತ್ಕಲ್ ಬಳಿಯ ಕುಳಾಯಿ ಹೊಸಬೆಟ್ಟುವಿನಲ್ಲಿ ನಡೆದಿದೆ.

ಕುಳಾಯಿ ಹೊಸಬೆಟ್ಟುವಿನ‌ ಭರತ್ ಕುಮಾರ್ ಎಂಬವರ ಕುಟುಂಬದ ಕಲ್ಲುರ್ಟು, ಪಂಜುರ್ಲಿ ದೈವಸ್ಥಾನಕ್ಕೆ ಜ.8 ರ ರಾತ್ರಿ 10.30 ಗಂಟೆಯಿಂದ ಜ.9 ಬೆಳಗ್ಗೆ 7.45ರ ಒಳಗೆ ಯಾರೋ ನುಗ್ಗಿ ಬೆಳ್ಳಿಯ ಕಿರೀಟ, ಬೆಳ್ಳಿಯ ಮೂರ್ತಿ, ಬೆಳ್ಳಿಯ ಕಡ್ಸಲೆ, ಚಿನ್ನದ ಕರಿಮಣಿ ಸರ ಹಾಗೂ ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದಾರೆ. ಕಳವಾದ ಸೊತ್ತುಗಳ ಅಂದಾಜು ಮೌಲ್ಯ 1.40. ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಅದೇ ರೀತಿ ಕುಳಾಯಿ ಹೊಸಬೆಟ್ಟುವಿನ ಹೊಯಿಗೆ ದಿಡ್ಡು ಎಂಬಲ್ಲಿನ ಕಲ್ಲುರ್ಟಿ, ಕಲ್ಕುಡ ಹಾಗೂ ವರ್ತೇಶ್ವರಿ ಜೋಡು ಪಂಜುರ್ಲಿ ದೈವಸ್ಥಾನದಲ್ಲಿ ಜ.8 ರ ರಾತ್ರಿ ಸಮಯದಲ್ಲಿ ಕಳವಾಗಿದೆ ಎಂದು ದೂರು ದಾಖಲಾಗಿದೆ. ಇಲ್ಲಿ ತಾಮ್ರದ ಕಾಣಿಕೆ ಡಬ್ಬಿ, ಬೆಳ್ಳಿಯ ಕಿರೀಟ ಹಾಗೂ ಬೆಳ್ಳಿಯ ಕಡ್ಸಲೆ ಸೇರಿ 1 ಕೆಜಿ ತೂಕದ ಬೆಳ್ಳಿಯ ಸೊತ್ತುಗಳನ್ನು ಕಳ್ಳತನ ಮಾಡಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓದಿ : ಸಂಪುಟ ವಿಸ್ತರಣೆ, ಉಪ ಚುನಾವಣಾ ಅಭ್ಯರ್ಥಿ ಆಯ್ಕೆ ಕುರಿತು ವರಿಷ್ಠರ ಜೊತೆ ಚರ್ಚೆ: ಸಿಎಂ

ABOUT THE AUTHOR

...view details