ಉಪ್ಪಿನಂಗಡಿ (ದ.ಕ) :ಕಳ್ಳತನ ಮಾಡಲು ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳನೊಬ್ಬ, ಅದೇ ಮನೆಯ ಕೊಠಡಿಯಲ್ಲಿ ಆರಾಮವಾಗಿ ನಿದ್ರಿಸಿ ಬೆಳಗ್ಗೆ ಮನೆಯವರ ಕೈಗೆ ಸಿಕ್ಕಿಹಾಕಿಕೊಂಡ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಉದ್ಯಮಿ ಸುದರ್ಶನ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಡುರಾತ್ರಿ ಮನೆಯ ಚಾವಣಿ ಏರಿ ಹಂಚು ತೆಗೆದು ಒಳ ನುಗ್ಗಿದ ಉತ್ತರ ಭಾರತ ಮೂಲದ ಕಳ್ಳನೊಬ್ಬ, ಟಿವಿ ಸ್ಟ್ಯಾಂಡ್ನಲ್ಲಿದ್ದ ಕೀ ಗೊಂಚಲು ತೆಗೆದಿದ್ದಾನೆ. ಬಳಿಕ ಮನೆಯ ನಡು ಕೊಠಡಿಗೆ ತೆರಳಿ ಅಲ್ಲಿಯೇ ಆರಾಮಾಗಿ ನಿದ್ರೆಗೆ ಜಾರಿದ್ದಾನೆ. ಇಷ್ಟಾದರೂ ಮನೆಯವರಿಗೆ ಎಚ್ಚರ ಆಗಿರಲಿಲ್ಲ.