ಕರ್ನಾಟಕ

karnataka

ETV Bharat / state

ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಕಣ್ಮರೆ - ಅರ್ಫಾದ್

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಕುಮಾರಧಾರ ನದಿಯಲ್ಲಿ ನಡೆದಿದೆ.

The young man missing in water
ಯುವಕ ನೀರಿನಲ್ಲಿ ಮುಳುಗಿ ಕಣ್ಮರೆ

By

Published : Feb 27, 2020, 7:42 PM IST

ದಕ್ಷಿಣ ಕನ್ನಡ:ಸ್ನಾನಕ್ಕೆಂದು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಕುಮಾರಧಾರ ನದಿಯಲ್ಲಿ ಇಂದು ನಡೆದಿದೆ.

ನಾಪತ್ತೆಯಾಗಿರುವ ಯುವಕನನ್ನು ಕೊಯಿಲ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬುವರ ಪುತ್ರ ಅರ್ಫಾದ್ (22) ಎಂದು ಗುರುತಿಸಲಾಗಿದೆ. ಅರ್ಫಾದ್ ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗಿಳಿದಿದ್ದು, ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ.

ಕುಮಾರಧಾರ‌ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಕಡಬ ಪೋಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು, ಮುಳುಗು ತಜ್ಞರು ಭೇಟಿ ನೀಡಿದ್ದಾರೆ.

ABOUT THE AUTHOR

...view details