ಕರ್ನಾಟಕ

karnataka

ETV Bharat / state

ಸ್ನಾನಕ್ಕೆ ಕೆರೆಗೆ ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಸಾವು - young man died manglore

ಸ್ನಾನಕ್ಕಿಳಿದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಸಿದ್ಧಿ ಹೊಂದಿದ ಪುಣ್ಯಕ್ಷೇತ್ರ ಕಾರಿಂಜದಲ್ಲಿ ನಡೆದಿದೆ.

manglore
ಪುಣ್ಯಕ್ಷೇತ್ರ ಕಾರಿಂಜ

By

Published : Feb 10, 2020, 8:18 AM IST

ಮಂಗಳೂರು:ಸ್ನಾನಕ್ಕೆ ಇಳಿದಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕಾರಿಂಜದಲ್ಲಿ ನಡೆದಿದೆ.

ಕಡ್ತಲಬೆಟ್ಟು ನಿವಾಸಿ ಸುಕೇಶ್ (25) ಮೃತ ಯುವಕ. ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಕೇಶ್ ಅವರು ತನ್ನಿಬ್ಬರು ಸ್ನೇಹಿತರೊಂದಿಗೆ ರಜಾದ ಹಿನ್ನೆಲೆಯಲ್ಲಿ ಕಾರಿಂಜ ಕ್ಷೇತ್ರಕ್ಕೆ ಭಾನುವಾರ ಸಂಜೆ ಆಗಮಿಸಿದ್ದರು. ಈ ಸಂದರ್ಭ ಸ್ನಾನಕ್ಕಿಳಿದ ವೇಳೆ ಕೆರೆಯ ಆಳ ತಿಳಿಯದೆ ಮುಳುಗಿದ್ದಾರೆ.

ಸ್ನೇಹಿತರು ಮತ್ತು ಸ್ಥಳೀಯರು ಕೂಡಲೇ ಅಗ್ನಿ ಶಾಮಕದಳಕ್ಕೆ ಮತ್ತು ಪೊಲೀಸರಿಗೆ ಕರೆ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಾತ್ರಿ 8.30ರ ವೇಳೆಗೆ ಸುಕೇಶ್ ಅವರನ್ನು ಮೇಲೆತ್ತಿದರು. ಆದ್ರೆ ಅವರು ಅದಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ.

ಈ ಕುರಿತು ಪುಂಜಾಲಕಟ್ಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details