ಉಳ್ಳಾಲ: ನಿಗೂಢವಾಗಿ ಉಳಿದಿದ್ದ ಮದಕ ತಾರಿಗುಡ್ಡೆ ನಿವಾಸಿ ಟೈಲರ್ ಶೋಭಾ (30) ಪ್ರಕರಣಕ್ಕೆ ಸಂಬಂಧಿಸಿ ನಾಗುರಿ ಸಂಚಾರಿ ಠಾಣಾ ಪೊಲೀಸರು ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.
ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಸಿಕ್ಕ ಸಿಸಿಟಿವಿ ಆಧಾರದಲ್ಲಿ ಶೋಭಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ ರಿಕ್ಷಾ ಚಾಲಕನಿಗಾಗಿ ಮುಡಿಪು, ತೌಡುಗೋಳಿ, ಕೊಣಾಜೆ, ದೇರಳಕಟ್ಟೆ, ಅಂಬ್ಲಮೊಗರು, ಎಲಿಯಾರುಪದವು, ಗ್ರಾಮಚಾವಡಿ ಸಹಿತ ಹಲವು ರಿಕ್ಷಾ ಪಾರ್ಕ್ಗಳಲ್ಲಿ ಶೋಧ ನಡೆಸಿ, ರಿಕ್ಷಾ ಚಾಲಕ ಚೆಂಬುಗುಡ್ಡೆ ನಿವಾಸಿ ಸಾದಿಕ್ (25) ಎಂಬಾತನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು, ಸಂಚಾರಿ ಎಸಿಪಿ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.