ಹೊಸಮಠ (ದಕ್ಷಿಣ ಕನ್ನಡ) :ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯ ಗ್ರಾಮದ ಹೊಸಮಠ ದೇರಾಜೆ ಕ್ರಾಸ್‌ನ ಸಮೀಪ ರಾಜ್ಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡದ ಅಂಗಡಿಗಳಿಗೆ ಗ್ರಾಮ ಪಂಚಾಯತ್ ಬೀಗ ಹಾಕಿದೆ.
ಅನಧಿಕೃತ ಅಂಗಡಿ ಕೋಣೆಗಳಿಗೆ ಬೀಗ ಜಡಿದ ಗ್ರಾಮ ಪಂಚಾಯತ್ - ಹೊಸಮಠ ದೇರಾಜೆ ಕ್ರಾಸ್ ನ ಸಮೀಪ ರಾಜ್ಯ ಹೆದ್ದಾರಿ ಬದಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ
ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯ ಗ್ರಾಮದ ಹೊಸಮಠ ದೇರಾಜೆ ಕ್ರಾಸ್ ನ ಸಮೀಪ ರಾಜ್ಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡದ ಅಂಗಡಿಗಳಿಗೆ ಗ್ರಾಮ ಪಂಚಾಯತ್ ಬೀಗ ಹಾಕಿದೆ.
![ಅನಧಿಕೃತ ಅಂಗಡಿ ಕೋಣೆಗಳಿಗೆ ಬೀಗ ಜಡಿದ ಗ್ರಾಮ ಪಂಚಾಯತ್ the-village-panchayat-had-locked-the-unpermission-buildings-in-dakshina-kannada](https://etvbharatimages.akamaized.net/etvbharat/prod-images/768-512-5785394-thumbnail-3x2-sanju.jpg)
ಉಪ್ಪಿನಂಗಡಿ–ಕಡಬ ರಾಜ್ಯ ಹೆದ್ದಾರಿಯ ಲೋಕೋಪಯೋಗಿ ವ್ಯಾಪ್ತಿಯಲ್ಲಿ ಅನುಮತಿರಹಿತವಾಗಿ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಕಟ್ಟಡದ ಅಂಗಡಿಗಳಿಗೆ ಸಾರ್ವಜನಿಕರ ದೂರುಗಳು ಬಂದಿದ್ವು. ಈ ದೂರುಗಳನ್ನು ಪರಿಶೀಲಿಸಿ ಗ್ರಾ.ಪಂನ ನಿರ್ಣಯದಂತೆ ಕಡಬ ಪೊಲೀಸರ ಸಮ್ಮುಖದಲ್ಲಿ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ ಎಂದು ಕುಟ್ರುಪ್ಪಾಡಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.
ಸ್ಥಳೀಯ ವ್ಯಕ್ತಿಯೋರ್ವರಿಗೆ ಈ ಕಟ್ಟಡ ಸೇರಿದ್ದು, ಇವರು ವಾಸ್ತವ್ಯದ ಮನೆ ಕಟ್ಟಿದ್ದಲ್ಲದೇ ಸುಮಾರು 16 ಜನರಿಗೆ ಈ ಕಟ್ಟಡದಲ್ಲಿ ಬಾಡಿಗೆಗೆ ಕೊಠಡಿಗಳನ್ನು ನೀಡಿದ್ದರು. ಈ ಕಟ್ಟಡವನ್ನು ತೆರವುಗೊಳಿಸುವಂತೆ ಹಲವು ಬಾರಿ ಕಟ್ಟಡ ಮಾಲೀಕರಿಗೆ ನೋಟಿಸ್ ಕೂಡಾ ನೀಡಲಾಗಿತ್ತು.ಆದರೆ ತೆರವುಗೊಳಿಸುವ ಯಾವುದೇ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಗ್ರಾ.ಪಂ ಕಾನೂನು ಕ್ರಮಕ್ಕೆ ಮುಂದಾಗಿದೆ.
TAGGED:
kutrupadi village panchayat