ಕರ್ನಾಟಕ

karnataka

ETV Bharat / state

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಿದವರ ಮೇಲೆ ರೂ. 9,500 ದಂಡ

ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ, 9.500 ರೂ ದಂಡ ವಿಧಿಸಿದ್ದಾರೆ. ಅಧಿಕಾರಿಗಳು ಸೆಂಟ್ರಲ್ ಮಾರುಕಟ್ಟೆ, ಗಣಪತಿ ಶಾಲೆ ರಸ್ತೆ, ಭವಂತಿ ಸ್ಟ್ರೀಟ್ ಮುಂತಾದ ಸ್ಥಳಗಳಲ್ಲಿರುವ ಸುಮಾರು 20ಕ್ಕಿಂತ ಹೆಚ್ಚು ಉದ್ದಿಮೆಗಳಿಗೆ ದಾಳಿ ನಡೆಸಿ ಸುಮಾರು 30ಕೆಜಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ

By

Published : Oct 16, 2019, 11:44 PM IST

ಮಂಗಳೂರು:ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಇದರ ಮಧ್ಯೆ ಕೂಡ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಿಢೀರ್​ ದಾಳಿ ಮಾಡಿ, 9.500 ರೂ ದಂಡ ವಿಧಿಸಿದ್ದಾರೆ. ಹಲವಾರು ಉದ್ದಿಮೆದಾರರು, ವ್ಯಾಪಾರಸ್ಥರು, ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಅಧಿಕಾರಿಗಳು ಸೆಂಟ್ರಲ್ ಮಾರುಕಟ್ಟೆ, ಗಣಪತಿ ಶಾಲೆ, ರಸ್ತೆ, ಭವಂತಿ ಸ್ಟ್ರೀಟ್ ಮುಂತಾದ ಸ್ಥಳಗಳಲ್ಲಿರುವ ಸುಮಾರು 20ಕ್ಕಿಂತ ಹೆಚ್ಚು ಉದ್ದಿಮೆಗಳಿಗೆ ದಾಳಿ ನಡೆಸಿ ಸುಮಾರು 30ಕೆಜಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ರೂ.9500 ದಂಡ ವಿಧಿಸಿದ್ದಾರೆ. ಆರೋಗ್ಯ ವಿಭಾಗದ ಪರಿಸರ ಅಭಿಯಂತರರಾದ ಶಬರಿನಾಥ್ ರೈ, ಆರೋಗ್ಯ ನಿರೀಕ್ಷಕರಾದ ಕರುಣಾಕರ್, ಭರತ್ ಕುಮಾರ್, ಯಶವಂತ್ ಕುಮಾರ್, ರಕ್ಷಿತಾ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details