ಮಂಗಳೂರು:ನಗರದ ಮಿನಿ ವಿಧಾನಸೌಧದ ಬಳಿ ಇದ್ದ ಅಪರಿಚಿತ ಮೃತದೇಹವನ್ನು ವೈದ್ಯಕೀಯ ಸಿಬ್ಬಂದಿಗೆ ಕಾಯದೆ ಆಸ್ಪತ್ರೆಗೆ ಸಾಗಿಸಿದ ಟ್ರಾಫಿಕ್ ಪೊಲೀಸ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಅಭಿನಂದಿಸಿದ್ದಾರೆ.
ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಸಿಎಚ್ ಸಿ ಸಂಪತ್ ಬಂಗೇರ ಅವರು ಈ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಸಂಪತ್ ಅವರು ನವೆಂಬರ್ 9 ರಂದು ನಗರದ ಪುರಭವನ ಸಮೀಪದ ಮಿನಿ ವಿಧಾನಸೌಧ ಬಳಿ ಕರ್ತವ್ಯದಲ್ಲಿದ್ದಾಗ ಅಪರಿಚಿತ ಮೃತದೇಹ ಕಂಡುಬಂದಿದೆ.