ಬಂಟ್ವಾಳ :ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ತಾಲೂಕಿನ ದೇವಸ್ಥಾನಗಳು ಹಲವು ಷರತ್ತುಗಳನ್ನು ಭಕ್ತರಿಗೆ ವಿಧಿಸುವ ಮೂಲಕ ಬಾಗಿಲು ತೆರದಿವೆ. ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರದ ಹಿನ್ನೆಲೆ ಬೆಳಗ್ಗಿನಿಂದಲೇ ಜನರು ಆಗಮಿಸಿ ದೇವರ ದರ್ಶನ ಪಡೆದರು. ಕೋವಿಡ್-19 ತಡೆಗಟ್ಟುವ ಹಿನ್ನೆಲೆ ಸರ್ಕಾರದ ಆದೇಶದಂತೆ ದರ್ಶನಕ್ಕೆ ಅವಕಾಶವಷ್ಟೇ ಇದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ದೇವಾಲಯದ ಪ್ರವೇಶ ದ್ವಾರದಲ್ಲಿ ದೇಹದ ಉಷ್ಣತೆ ತಪಾಸಣೆ ಮಾಡಲಾಗುತ್ತದೆ ಎಂದು ಸೂಚಿಸಲಾಗಿತ್ತು.
ಷರತ್ತುಗಳೊಂದಿಗೆ ಬಾಗಿಲು ತೆರೆದ ದೇವಾಲಯಗಳು.. ನಿಯಮ ಪಾಲಿಸಿ ದರ್ಶನ ಪಡೆದ ಭಕ್ತರು.. - ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ದೇವಾಲಯದ ಪ್ರವೇಶ ದ್ವಾರದಲ್ಲಿ ದೇಹದ ಉಷ್ಣತೆ ತಪಾಸಣೆ ಮಾಡಲಾಗುತ್ತದೆ ಎಂದು ಸೂಚಿಸಲಾಗಿತ್ತು.
ಷರತ್ತುಗಳೊಂದಿಗೆ ಬಾಗಿಲು ತೆರೆದ ದೇವಾಲಯಗಳು
ಅಲ್ಲದೇ ಕೈಗಳಿಗೆ ಸ್ಯಾನಿಟೈಸರ್ ಬಳಸುವುದು ಕಡ್ಡಾಯ ಎಂಬ ನಿಬಂಧನೆಗಳನ್ನು ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಹಿನ್ನೆಲೆ ಭಕ್ತರು ಅವನ್ನೆಲ್ಲ ಪಾಲಿಸಿ ದೇವಸ್ಥಾನ ಪ್ರವೇಶಿಸಿದರು. ಒಳಗೆ ತೀರ್ಥ ಪ್ರಸಾದ ವಿತರಣೆ ಇರಲಿಲ್ಲ. ತಾಲೂಕಿನ ಪ್ರಮುಖ ದೇವಸ್ಥಾನಗಳಾದ ಪೊಳಲಿ, ಕಾರಿಂಜಗಳಲ್ಲೂ ಇದೇ ಕ್ರಮ ಅನುಸರಿಸಲಾಯಿತು.