ಮಂಗಳೂರು:ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್ ರಾಜೀನಾಮೆ ಎಲ್ಲರಿಗೂ ಆಘಾತ ಉಂಟುಮಾಡಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಯಾವ ಒತ್ತಡ ಇದೆ ಎಂಬುವುದನ್ನು ನಾವು ತಿಳಿದುಕೊಂಡು ಅದನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು.
ಡಿಸಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಹಿಂದಿನ ಕಾರಣ ಬಯಲಿಗೆಳೆಯಬೇಕಾಗಿದೆ: ಎಂ.ಬಿ.ಸದಾಶಿವ - ಜೆಡಿಎಸ್ ರಾಜ್ಯ ಉಪಾಧ್ಯಕ್ಷ
ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್ ರಾಜೀನಾಮೆ ಹಿಂದಿನ ಕಾರಣವನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು.
![ಡಿಸಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಹಿಂದಿನ ಕಾರಣ ಬಯಲಿಗೆಳೆಯಬೇಕಾಗಿದೆ: ಎಂ.ಬಿ.ಸದಾಶಿವ](https://etvbharatimages.akamaized.net/etvbharat/prod-images/768-512-4369137-thumbnail-3x2-vid.jpg)
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಯಾಗಿ ಸೇವೆ ಸಲ್ಲಿಸುವವರು ಈ ರೀತಿಯಲ್ಲಿ ರಾಜೀನಾಮೆ ನೀಡಿದ್ದಾರೆಂದರೆ ಬಹುಶಃ ಅವರ ಪರಿಸರದಲ್ಲಿ ಒತ್ತಡ ಬಂದಿದೆ. ಅದನ್ನು ಅವರು ತಮ್ಮ ಒಳ್ಳೆಯತನದಿಂದ ಹೇಳಲಿಚ್ಛಿಸಿಲ್ಲ. ಆದರೆ ಅದನ್ನು ತಿಳಿಯಬೇಕಾದ ಅಗತ್ಯವಿದೆ ಎಂದು ಹೇಳಿದರು. ಕೇರಳದ ಗೋಪಿನಾಥ್ ಕಣ್ಣನ್, ನಮ್ಮ ಪಕ್ಕದ ಅಣ್ಣಾಮಲೈ ರಾಜೀನಾಮೆ ನೀಡಿದಾಗ ಏನೋ ವೈಯುಕ್ತಿಕ ಕಾರಣ ಎಂದು ಸುಮ್ಮನಾದೆವು. ಆದರೆ ನಮ್ಮ ಊರಿನಲ್ಲೇ ಸೇವೆ ಮಾಡಿದ, ಉತ್ತಮ ವ್ಯಕ್ತಿತ್ವದ ಜಿಲ್ಲಾಧಿಕಾರಿಯೋರ್ವರು ರಾಜೀನಾಮೆ ನೀಡಿರುವುದು ಎಲ್ಲೋ ಏನೋ ತಪ್ಪಿದೆ ಎಂದೆನಿಸುತ್ತದೆ ಎಂದರು.
ಮುಂದೆ ಇಂತಹ ಅಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬಿ ಆಡಳಿತ ಯಂತ್ರವನ್ನು ಬಲಿಷ್ಠಗೊಳಿಸಬೇಕಾಗಿದೆ. ಆ ದೃಷ್ಟಿಯಿಂದ ಸಸಿಕಾಂತ್ ಸೆಂಥಿಲ್ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದುಕೊಂಡು, ಮತ್ತೆ ಅವರ ಸೇವೆ ರಾಷ್ಟ್ರಕ್ಕೆ ದೊರುಕುವಂತೆ ಮಾಡಬೇಕೆಂದು ಜನತಾದಳ ಒತ್ತಾಯ ಮಾಡುತ್ತದೆ ಎಂದು ಎಂ.ಬಿ.ಸದಾಶಿವ ಹೇಳಿದರು.