ಕರ್ನಾಟಕ

karnataka

ETV Bharat / state

ಎರಡು ತಿಂಗಳಿನಿಂದ ವೇತನ ನೀಡದೆ ಕೊರೊನಾ ವಾರಿಯರ್ಸ್ ಬಗ್ಗೆ ಸರ್ಕಾರದಿಂದ​ ನಿರ್ಲಕ್ಷ್ಯ: ಖಾದರ್

ನ್ಯಾಷನಲ್ ಹೆಲ್ತ್ ಮಿಷನ್​ನಡಿ ಇರುವ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಸರ್ಕಾರ ಕೊರೊನಾ ವಾರಿಯರ್ಸ್ ಬಗ್ಗೆ ನಿರ್ಲಕ್ಷ್ಯ ಮಾಡಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

UT Khader
ಮಾಜಿ ಸಚಿವ ಯುಟಿ ಖಾದರ್

By

Published : May 30, 2020, 3:28 PM IST

ಮಂಗಳೂರು: ರಾಜ್ಯ ಸರ್ಕಾರ ಎರಡು ತಿಂಗಳಿನಿಂದ ವೇತನ ನೀಡದೆ ಕೊರೊನಾ ವಾರಿಯರ್ಸ್​ ಬಗ್ಗೆ ನಿರ್ಲಕ್ಷ್ಯ ಮಾಡಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಷನಲ್ ಹೆಲ್ತ್ ಮಿಷನ್​ನಡಿ ಇರುವ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಕಳೆದ ಎರಡು ತಿಂಗಳಿನಿಂದ ಕೊರೊನಾ ವಾರಿಯರ್ಸ್​ಸಮಯ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಇವರಿಗೆ ತಕ್ಷಣ ವೇತನವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಯು.ಟಿ.ಖಾದರ್

ಆಶಾ ಕಾರ್ಯಕರ್ತೆಯರಿಗೂ ಸರಿಯಾದ ವೇತನ ಬಿಡುಗಡೆ ಮಾಡಿಲ್ಲ. ಸಿಎಂ ಅವರು ಹೆಚ್ಚುವರಿ ವೇತನ ಕೊಡುತ್ತಾರೆ ಅಂತ ಹೇಳಿದ್ದಾರೆ. ಆದರೆ ಅವರು ಮೊದಲು ಕೊಡುವ ಸಂಬಳವನ್ನು ಸರಿಯಾಗಿ ಕೊಡಲಿ ಎಂದು ಆಗ್ರಹಿಸಿದರು. ಎರಡು ತಿಂಗಳು ಕೊರೊನಾ ವಾರಿಯರ್ಸ್​ಗೆ ಸಂಬಳ ನೀಡದ ಸರ್ಕಾರ ಕೊರೊನಾ ಪೀಡಿತರನ್ನು ಯಾವ ರೀತಿ ಆರೈಕೆ ಮಾಡಬಹುದು ಎಂದು ಪ್ರಶ್ನಿಸಿದರು.

ಪಿಎಂ ಕೇರ್ಸ್​ ಫಂಡ್​​ನಲ್ಲಿ ಸಂಗ್ರಹವಾದ ಹಣದಲ್ಲಿ ಕೊರೊನಾ ವಾರಿಯರ್ಸ್​ಗೆ ವೇತನ ನೀಡಲಿ. ಪಿಎಂ ಕೇರ್ಸ್​ ಹಣವನ್ನು ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ನೀಡಲಿ ಎಂದು ಆಗ್ರಹಿಸಿದರು.

ABOUT THE AUTHOR

...view details