ಮಂಗಳೂರು: ಸಂವಿಧಾನ, ಪ್ರಜಾತಂತ್ರ ವಿರೋಧಿಯಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಉರುಳಿಸಲು ಮಾಡುವ ಪ್ರಯತ್ನಕ್ಕೆಸುಪ್ರೀಂಕೋರ್ಟ್ ತನ್ನ ತೀರ್ಪಿನ ಮೂಲಕ ಸ್ಪಷ್ಟಸಂದೇಶ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಹೇಳಿದರು.
ಪಕ್ಷ ವಿಪ್ ನೀಡುವುದಕ್ಕೂ ಸ್ಪೀಕರ್‌ಗೂ ಸಂಬಂಧವಿಲ್ಲ.. ಸಚಿವ ಯು ಟಿ ಖಾದರ್ - undefined
ಪ್ರಜಾತಂತ್ರ ವಿರೋಧಿಯಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಉರುಳಿಸಲು ಮಾಡುವ ಪ್ರಯತ್ನಕ್ಕೆ ಸಂದೇಶ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಹೇಳಿದರು.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರ ಅಧಿಕಾರದ ಬಗ್ಗೆ ಆ್ಯಂಟಿ ಡಿಫೆಕ್ಷನ್ ಆ್ಯಕ್ಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು ದೇಶಕ್ಕೆ ಸಂದೇಶ ಕೊಟ್ಟಿದೆ ಎಂದರು. ಪಕ್ಷ ವಿಪ್ ನೀಡುವುದಕ್ಕೂ ಸ್ಪೀಕರ್‌ಗೂ ಯಾವುದೇ ಸಂಬಂಧವಿಲ್ಲ. ಪಕ್ಷ ವಿಪ್ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಏನನ್ನೂ ಹೇಳಿಲ್ಲ ಎಂದರು.
ವಿಶ್ವಾಸ ಮತದಲ್ಲಿ ಸರ್ಕಾರ ಜಯಗಳಿಸುತ್ತದೆ. ಆದರೆ, ಈ ತೀರ್ಪಿನ ಮೂಲಕ ಕೇಂದ್ರ ಸರ್ಕಾರ ಯಾವುದೇ ರಾಜ್ಯ ಸರ್ಕಾರವನ್ನು ಸಂವಿಧಾನ ವಿರೋಧಿಯಾಗಿ ಉರುಳಿಸಲು ಸಾಧ್ಯವಿಲ್ಲ ಎಂಬ ಸಂದೇಶ ಕೊಟ್ಟಿದೆ ಎಂದು ಹೇಳಿದರು.