ಕರ್ನಾಟಕ

karnataka

ETV Bharat / state

ಮದಿರೆ, ಮಡದಿ ನಶೆ: ಹೆತ್ತ ತಂದೆಯನ್ನೇ ಮಸಣಕ್ಕಟ್ಟಿದ ಪಾಪಿ ಮಗ - ಹೆತ್ತ ತಂದೆಯನ್ನೇ ಮಸಣಕ್ಕಟ್ಟಿದ ಪಾಪಿ ಮಗ

ಬೆಂಗಳೂರಿನಲ್ಲಿ ಪ್ರೀತಿಸಿ ವಿವಾಹವಾಗಿದ್ದ ಹೆಂಡತಿಯನ್ನ, ಮನೆಗೆ ಕರೆತಂದಿರುವುದನ್ನು ತಂದೆ ವಿರೋಧಿಸಿದ್ದಕ್ಕೆ ಕೋಪಗೊಂಡು, ಕುಡಿದ ಮತ್ತಿನಲ್ಲಿ ಹರೀಶ ಕಟ್ಟಿಗೆಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

The son who murdered the father in Belthangadi
ಹೆತ್ತ ತಂದೆಯನ್ನೇ ಮಸಣಕ್ಕಟ್ಟಿದ ಪಾಪಿ ಮಗ

By

Published : Jan 19, 2021, 7:30 AM IST

ಬೆಳ್ತಂಗಡಿ: ತಂದೆಯನ್ನೇ ಮಗನೊಬ್ಬ ಕೊಲೆ‌ ಮಾಡಿದ ಘಟನೆ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸೋಮವಾರ ನಡೆದಿದೆ‌.

ಶ್ರೀಧರ ಪೂಜಾರಿ (55) ಅವರನ್ನು ಅವರ ಪುತ್ರ ಹರೀಶ ( 27) ಕೊಲೆ ಮಾಡಿದ್ದಾನೆ.‌ ಬೆಂಗಳೂರಿನಲ್ಲಿ ಪ್ರೀತಿಸಿ ವಿವಾಹವಾಗಿದ್ದ ಹೆಂಡತಿಯನ್ನ , ಮನೆಗೆ ಕರೆತಂದಿರುವುದನ್ನು ತಂದೆ ವಿರೋಧಿಸಿದ್ದರು. ಇದರಿಂದ ಕೋಪಗೊಂಡು ಕುಡಿದ ಮತ್ತಿನಲ್ಲಿ ಹರೀಶ ಕಟ್ಟಿಗೆಯಲ್ಲಿ ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡು ಶ್ರೀಧರ ಪೂಜಾರಿ ಮೃತಪಟ್ಟಿದ್ದಾರೆ.‌

ಓದಿ : ವಿವಾಹ ಆಮಂತ್ರಣ ಪತ್ರ ನೀಡಿ ವಾಪಸ್ಸಾಗುವ ವೇಳೆ ಅಪಘಾತ; ವಧು ಸೇರಿ ಮೂವರು ಸಾವು

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಸಿಬಂದಿ ಭೇಟಿ ನೀಡಿ ಪರಿಶಿಲನೆ ನಡೆಸಿ, ಆರೋಪಿಯನ್ನ ಬಂಧಿಸಿದ್ದಾರೆ‌. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details