ಕರ್ನಾಟಕ

karnataka

ETV Bharat / state

ವಾರದ ಅಂತರದಲ್ಲಿ ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು - ಸೆವೆನ್ ಸೀಸ್ ಎಕ್ಸ್​ಪ್ಲೋರರ್ ಎಂಬ ಈ ಐಷಾರಾಮಿ ಹಡಗು

ಒಂದೇ ವಾರದ ಅಂತರದಲ್ಲಿ ಎರಡು ಐಷಾರಾಮಿ ಹಡಗುಗಳು ಮಂಗಳೂರಿನ ಬಂದರಿಗೆ ಆಗಮಿಸಿದ್ದು, ಪ್ರಯಾಣಿಕರಿಗೆ ಭವ್ಯ ಸ್ವಾಗತ ಕೋರಲಾಯಿತು.

second luxury cruise  second luxury cruise arrived at New Mangalore port  New Mangalore port news  luxury cruise arrived in Mangaluru  ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು  ವಾರದ ಅಂತರದಲ್ಲಿ ಎರಡು ಐಷಾರಾಮಿ ಹಡಗು  ಪ್ರಯಾಣಿಕರಿಗೆ ಭವ್ಯ ಸ್ವಾಗತ  ಮಂಗಳೂರು ಬಂದರಿಗೆ ಮತ್ತೊಂದು ಐಷಾರಾಮಿ ಹಡಗು  ಸೆವೆನ್ ಸೀಸ್ ಎಕ್ಸ್​ಪ್ಲೋರರ್ ಎಂಬ ಈ ಐಷಾರಾಮಿ ಹಡಗು  ಐಷಾರಾಮಿ ಹಡಗು ಮಾರ್ಷಲ್ ಐಲ್ಯಾಂಡ್​ನಿಂದ ಆಗಮಿಸಿದೆ
ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು

By

Published : Dec 3, 2022, 7:33 AM IST

Updated : Dec 3, 2022, 8:53 AM IST

ಮಂಗಳೂರು: ವಾರದ ಅಂತರದಲ್ಲಿ ನವ ಮಂಗಳೂರು ಬಂದರಿಗೆ ಮತ್ತೊಂದು ಐಷಾರಾಮಿ ಹಡಗು ಆಗಮಿಸಿದೆ. ಸವೆನ್ ಸೀಸ್ ಎಕ್ಸ್ ಫ್ಲೋರರ್ ಎಂಬ ಈ ಐಷಾರಾಮಿ ಹಡಗು ಮಾರ್ಷಲ್ ಐಲ್ಯಾಂಡ್​ನಿಂದ ಆಗಮಿಸಿದೆ.

ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು

ಕೊರೊನಾ ಸಂದರ್ಭದಲ್ಲಿ ನವ ಮಂಗಳೂರು ಬಂದರಿಗೆ ಯಾವುದೇ ಐಷಾರಾಮಿ ಹಡಗು ಆಗಮಿಸಿರಲಿಲ್ಲ. ನವೆಂಬರ್​ 28 ರಂದು ಐಷಾರಾಮಿ ಹಡಗು ಮಂಗಳೂರಿಗೆ ಆಗಮಿಸಿತ್ತು. ಇದಾದ ಬಳಿಕ ಶುಕ್ರವಾರ ನವ ಮಂಗಳೂರು ಬಂದರಿಗೆ ಎರಡನೇ ಐಷಾರಾಮಿ ಪ್ರಯಾಣಿಕ ಹಡಗು ಆಗಮಿಸಿದೆ.

ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು

ಈ ಹಡಗಿನಲ್ಲಿ 686 ಮಂದಿ ಪ್ರಯಾಣಿಕರು ಹಾಗೂ 552 ಸಿಬ್ಬಂದಿ ಮಂಗಳೂರಿಗೆ ಆಗಮಿಸಿದ್ದಾರೆ. ಸವೆನ್ ಸೀಸ್ ಎಕ್ಸ್ ಫ್ಲೋರರ್ ಹಡಗು ಇದಾಗಿದ್ದು, 223.74 ಮೀ. ಉದ್ದ ಹಾಗೂ 48 ಮೀ. ಅಗಲವಿದೆ. ನಿನ್ನೆ ಬೆಳಗ್ಗೆ 7ಗಂಟೆಗೆ ಈ ಹಡಗು ನವ ಮಂಗಳೂರು ಬಂದರಿಗೆ ಆಗಮಿಸಿದೆ.

ಪ್ರಯಾಣಿಕರಿಗೆ ಭವ್ಯ ಸ್ವಾಗತ

ಈ ಐಷಾರಾಮಿ ಹಡಗು ಮಾಲೆ (ಮಾಲ್ಡೀವ್ಸ್)ಗೆ ಹೋಗುವ ಮಾರ್ಗದಲ್ಲಿ ಕತಾರ್ ಬಂದರಿನಿಂದ ಭಾರತಕ್ಕೆ ಬಂದು ಮೊರ್ಮಗೋವಾಕ್ಕೆ ಆಗಮಿಸಿತ್ತು. ಅಲ್ಲಿಂದ ಹೊರಟ ಈ ಐಷಾರಾಮಿ ಹಡಗು ನವ ಮಂಗಳೂರು ಬಂದರಿಗೆ ನಿನ್ನೆ ಬೆಳಗ್ಗೆ ಬಂದು ತಲುಪಿದೆ.

ಪ್ರಯಾಣಿಕರಿಗೆ ಭವ್ಯ ಸ್ವಾಗತ

ಈ ಹಡಗಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ನವ ಮಂಗಳೂರು ಬಂದರು ಅಧಿಕಾರಿಗಳು ಭವ್ಯವಾಗಿ ಸ್ವಾಗತ ಕೋರಿ ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆ ಮಾಡಿದ್ದರು. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ಮಂಗಳೂರು ನಗರದ ಕುದ್ರೋಳಿ ಶ್ರೀಕ್ಷೇತ್ರ, ಕದ್ರಿ ದೇವಾಲಯ, ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಫಿಲಾಟೆಲಿಕ್ ಬ್ಯೂರೋ‌, ಸಂತ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಗೋಮಟೇಶ್ವರ ಪ್ರತಿಮೆ, ಮೂಡಬಿದ್ರಿಯ ಸಾವಿರಕಂಬದ ಬಸದಿಯ ವೀಕ್ಷಣೆಗೆ ಬಸ್, ಕಾರು, ಪ್ರೀಪೇಯ್ಡ್​ ಟ್ಯಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬಳಿಕ ಈ ಹಡಗು ಸಂಜೆ 6 ಗಂಟೆಗೆ ಮಾಲ್ಡೀವ್ಸ್​ನ ಮಾಲೆ ಬಂದರಿನತ್ತ ಪ್ರಯಾಣ ಬೆಳೆಸಿತು.

Last Updated : Dec 3, 2022, 8:53 AM IST

ABOUT THE AUTHOR

...view details