ಮಂಗಳೂರು: ಕಳೆದ ಎಂಟು ತಿಂಗಳಿಂದ ಬಿಎಸ್ಎನ್ಎಲ್ ನೆಟ್ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಆಕ್ರೋಶಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತಡ್ಕದ ಗ್ರಾಮಸ್ಥರು ಟವರ್ ಬುಡದಲ್ಲಿ ತರಕಾರಿ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಬಿಎಸ್ಎನ್ಎಲ್ ಟವರ್ ಕೆಳಗೆ ತರಕಾರಿ ಗಿಡ ನೆಟ್ಟ ಜನ... ಯಾಕೆ ಗೊತ್ತಾ..! - undefined
ತೀರಾ ಗ್ರಾಮಾಂತರ ಪ್ರದೇಶದ ಈ ಗ್ರಾಮಸ್ಥರಿಗೆ ಬಿಎಸ್ಎನ್ಎಲ್ ನೆಟ್ವರ್ಕ್ ಮಾತ್ರ ಇದ್ದು ಅದು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ನೆಟ್ವರ್ಕ್ ಸಿಗುತ್ತಿರಲಿಲ್ಲ. ಆದರೆ ಕಳೆದ ಏಳೆಂಟು ತಿಂಗಳಿಂದ ವಿದ್ಯುತ್ ಸಂಪರ್ಕ ಇದ್ದರೂ ನೆಟ್ವರ್ಕ್ ಸಿಗುತ್ತಿಲ್ಲ.
ಸೊಪ್ಪು, ತರಕಾರಿ ನೆಟ್ಟು ಪ್ರತಿಭಟನೆ
ಹರಿಹರ ಪಳ್ಳತಡ್ಕ ತೀರಾ ಗ್ರಾಮಾಂತರ ಪ್ರದೇಶವಾಗಿರುವುದರಿಂದ ಜನ ಬಿಎಸ್ಎನ್ಎಲ್ ನೆಟ್ವರ್ಕ್ ಅನ್ನೇ ನಂಬಿದ್ದು, ಅದು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟವರ್ ನ ಬುಡಕ್ಕೆ ಬಳ್ಳಿ ತರಹದ ಸೊಪ್ಪು, ತರಕಾರಿಗಳನ್ನು ನೆಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ಬಿಎಸ್ಎನ್ಎಲ್ ಅಧಿಕಾರಿಗಳು ಸಮಸ್ಯೆ ಸರಿಪಡಿಸಲು ವಿಳಂಬ ಮಾಡಿದ್ದಲ್ಲಿ ಅನುಪಯುಕ್ತ ಟವರನ್ನು ಗ್ರಾಮಸ್ಥರೇ ಸೇರಿ ತೆರವುಗೊಳಿಸುವ ಎಚ್ಚರಿಕೆ ನೀಡಿದರು.