ಮಂಗಳೂರು:ಜಗತ್ತನ್ನೇ ಆವರಿಸಿರುವ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತ ಸಜ್ಜಾಗಿದೆ. ಈ ಸಾಂಕ್ರಾಮಿಕ ಸೋಂಕನ್ನು ತಡೆಗಟ್ಟಲು ಕರ್ಫ್ಯೂ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರಕ್ಕೆ ತುರ್ತು ಕಾರ್ಯಗಳಿಗೆ ತನ್ನ ಕಚೇರಿಯಲ್ಲಿ ವಾರ್ ರೂಂ ಅನ್ನು ತೆರೆಯಲಾಗಿದೆ. ಅನಿವಾರ್ಯ ಅವಶ್ಯಕತೆ ಕಂಡು ಬಂದಲ್ಲಿ ದ.ಕ.ಜಿಲ್ಲೆಯ ಜನ ಈ ವಾರ್ ರೂಂ ಅನ್ನು ಸಂಪರ್ಕಿಸಬಹುದು ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ದ.ಕ.ಜಿಲ್ಲೆ ಲಾಕ್ ಡೌನ್: ತುರ್ತು ಅವಶ್ಯಕತೆಗಳಿಗೆ ವಾರ್ ರೂಂ ಸಂಪರ್ಕಿಸಲು ಸೂಚನೆ - ದ.ಕ.ಜಿಲ್ಲೆ ಲಾಕ್ ಡೌನ್
ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಸಾರ್ವಜನಿಕರ ಸಹಕಾರಕ್ಕೆ ತುರ್ತು ಕಾರ್ಯಗಳಿಗೆ ತನ್ನ ಕಚೇರಿಯಲ್ಲಿ ವಾರ್ ರೂಂ ಅನ್ನು ತೆರೆಯಲಾಗಿದ್ದು, ದ.ಕ.ಜಿಲ್ಲೆಯ ಜನ ಈ ವಾರ್ ರೂಂ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
![ದ.ಕ.ಜಿಲ್ಲೆ ಲಾಕ್ ಡೌನ್: ತುರ್ತು ಅವಶ್ಯಕತೆಗಳಿಗೆ ವಾರ್ ರೂಂ ಸಂಪರ್ಕಿಸಲು ಸೂಚನೆ Nalin Kumar](https://etvbharatimages.akamaized.net/etvbharat/prod-images/768-512-6528918-thumbnail-3x2-vid.jpg)
ಸರ್ಕಾರಿ ವ್ಯವಸ್ಥೆ ಗಳ ಅಡಿ ಮಾಹಿತಿಗಳು ಬೇಕಾದಲ್ಲಿ ತಮ್ಮ ಕಚೇರಿ ಕಾರ್ಯದರ್ಶಿ ಸುಧಾಕರ್ (948349676) ರನ್ನು ಸಂಪರ್ಕಿಸಬಹುದು. ಜಿಲ್ಲಾ ಸಹ ಸಂಯೋಜಕರಾಗಿ ಸುಧೀರ್ ಶೆಟ್ಟಿ ಕಣ್ಣೂರು(9844022213)ರವರನ್ನು ಸಂಪರ್ಕಿಸಬಹುದು. ತಮ್ಮ ಕಾರ್ಯಾಲಯದ ದೂರವಾಣಿ ಸಂಖ್ಯೆ (0824- 2448888) ಅನ್ನೂ ಸಂಪರ್ಕಿಸಬಹುದು ಎಂದು ಹೇಳಿದರು. ಅಲ್ಲದೇ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ಇವರ ದೂರವಾಣಿ ಸಂಖ್ಯೆ(9845182462), ಜಿಲ್ಲೆಯ ಸಹ ಸಂಚಾಲಕ ನಿತಿನ್ ಕುಮಾರ್ (9448467540) ರನ್ನು ಸಂಪರ್ಕಿಸಬಹುದು. ತುರ್ತು ಅಗತ್ಯ, ವೈದ್ಯರ ಸೇವೆ, ಆ್ಯಂಬುಲೆನ್ಸ್ ಬೇಕಾಗಿದ್ದಲ್ಲಿ ಗುರುಚರಣ್(9449847134), ಆಹಾರ ಸಾಮಗ್ರಿಗಳ ವ್ಯವಸ್ಥೆಗೆ ಕದ್ರಿ ಮನೋಹರ್ ಶೆಟ್ಟಿಯವರನ್ನು(0824-248888) ಸಂಪರ್ಕಿಸಬಹುದು.
ಇನ್ನು ಸಾರ್ವಜನಿಕರು ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ತಮ್ಮ ಮನೆಯಲ್ಲೇ ಇದ್ದುಕೊಂಡು ಜಿಲ್ಲೆಯ ಯಾವುದೇ ಭಾಗಗಳಿಂದ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಈ ಮೂಲಕ ನಮ್ಮ ವಾರ್ ರೂಂನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.