ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದವುಗಳನ್ನು ಪೊಲೀಸರು ಮುಚ್ಚಿಸಿದರು.
ಬೆಳ್ತಂಗಡಿಯಲ್ಲಿ ತೆರೆದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು - The Fear of the Coronavirus
ಬೆಳ್ತಂಗಡಿ ತಾಲೂಕಿನಲ್ಲಿ ಬೆಳಿಗ್ಗೆಯಿಂದಲೇ ತೆರೆದಿದ್ದ ಅಂಗಡಿಗಳನ್ನು ಪೊಲೀಸರು ಧ್ವನಿವರ್ಧಕದ ಮೂಲಕ ಬಂದ್ ಮಾಡಲು ಸೂಚಿಸಿದರು.
ತೆರೆದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು
ತಾಲೂಕಿನಲ್ಲಿ ಇಂದು ಬೆಳಗ್ಗೆಯಿಂದಲೇ ಜನರ ಸಂಚಾರ ವಿರಳವಾಗಿತ್ತು. ಧರ್ಮಸ್ಥಳ, ಉಜಿರೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲೂ ತೆರೆದ ಅಂಗಡಿಗಳನ್ನು ಮುಚ್ಚಿಸಲಾಯಿತು. ಅಗತ್ಯ ಕಾರ್ಯಗಳಿಗೆ ಜನ ಸ್ವಂತ ವಾಹನಗಳಲ್ಲಿ ಸಂಚರಿಸುವುದು ಮಾತ್ರ ಕಂಡು ಬಂತು.
ಬಸ್ ಸಂಚಾರ ಸ್ಥಗಿತ:ತಾಲೂಕು ಕೇಂದ್ರದಿಂದ ಮಂಗಳೂರು, ಪುತ್ತೂರು, ಕಾರ್ಕಳ, ಉಪ್ಪಿನಂಗಡಿ, ಮೂಡುಬಿದಿರೆ ಸೇರಿದಂತೆ ಹಲವು ಊರುಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್‌ಗಳು ಸಂಚಾರ ನಿಲ್ಲಿಸಿದ್ದವು.