ಕರ್ನಾಟಕ

karnataka

ETV Bharat / state

ಪುಂಡ-ಪೋಕರಿಗಳಿಗೆ ಲೇಡಿ ಲಾಠಿ.. ಮಹಿಳಾ ದೌರ್ಜನ್ಯ ತಡೆಗೆ ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಪಡೆ! - kannada news

ಉಳ್ಳಾಲದ ವೀರರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಸಮರ ಸಾರಿದ ಧೀರ ಮಹಿಳೆ. ಕಡಲ ನಗರಿಯ ಈ ವೀರ ಮಹಿಳೆಯ ಹೆಸರಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಅಬ್ಬಕ್ಕ ಪೊಲೀಸ್ ಪಡೆ ವಿಭಾಗ ಆರಂಭಿಸಿದೆ.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಮಂಗಳೂರಿನಲ್ಲಿ ಅಬ್ಬಕ್ಕ ಪಡೆ ಆರಂಭ

By

Published : Apr 30, 2019, 9:02 PM IST

ಮಂಗಳೂರು: ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಅಲ್ಲಲ್ಲಿ ನಡೆಯುತ್ತಲಿವೆ. ಆದರೆ, ಅದನ್ನು ಸಮರ್ಥವಾಗಿ ಎದುರಿಸಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಕೆಲ ಪ್ರಕರಣಗಳು ಪೊಲೀಸ್ ಠಾಣೆಯವರೆಗೂ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಪಡೆ ಆರಂಭವಾಗಿದೆ.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಪಡೆ

ಉಳ್ಳಾಲದ ವೀರರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಸಮರ ಸಾರಿದ ಧೀರ ಮಹಿಳೆ. ಕಡಲ ನಗರಿಯ ಈ ವೀರ ಮಹಿಳೆಯ ಹೆಸರಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಅಬ್ಬಕ್ಕ ಪೊಲೀಸ್ ಪಡೆ ವಿಭಾಗ ಆರಂಭಿಸಿದೆ. ನಗರದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಿಂದ ಕೇಂದ್ರೀಕರಿಸಿ ಈ ಅಬ್ಬಕ್ಕ ಪಡೆ ಮಂಗಳೂರಿನ ವಿವಿಧ ಭಾಗದಲ್ಲಿ ಕಾರ್ಯಾಚರಿಸಲಿದೆ. 50 ಮಂದಿ ಈ ತಂಡದಲ್ಲಿದ್ದು ನಿಗದಿತ ಸ್ಥಳದಲ್ಲಿ ಕಾರ್ಯಾಚರಿಸಲಿದ್ದಾರೆ. ಮಾಲ್, ಪ್ರವಾಸಿತಾಣ, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳಲ್ಲಿ ಈ ಅಬ್ಬಕ್ಕ ಪಡೆಯ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಮತ್ತು ಮಹಿಳಾ ಪೊಲೀಸರನ್ನೊಳಗೊಂಡ ಈ ತಂಡದಲ್ಲಿ ಒಬ್ಬರು ಎಸ್.ಐ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದು, ನಗರದಲ್ಲಿರುವ ಆಯಕಟ್ಟಿನ ಪ್ರದೇಶದಲ್ಲಿ ನಾಲ್ಕು ಮಂದಿ ತಂಡದಂತೆ ಕಾರ್ಯನಿರ್ವಹಿಸಲಿದೆ. ಇಂತಹ ಹತ್ತು ತಂಡ ನಗರದಲ್ಲಿ ಕರ್ತವ್ಯ ನಿರ್ವಹಿಸಲಿವೆ.

ABOUT THE AUTHOR

...view details