ಮಂಗಳೂರು:ಗೇಲ್ ಇಂಡಿಯಾ ಲಿಮಿಟೆಡ್ ವತಿಯಿಂದ ಮಾಡಲಾಗುತ್ತಿರುವಬಹುನಿರೀಕ್ಷಿತ ಪೈಪ್ ಲೈನ್ನಲ್ಲಿ ನೈಸರ್ಗಿಕ ಅನಿಲ ಪೂರೈಕೆ ಕಾರ್ಯ ಯಶಸ್ವಿಯಾಗಿ ಆರಂಭವಾಗಿದೆ.
ಕೊಚ್ಚಿಯಿಂದ ಪೈಪ್ಲೈನ್ ಮೂಲಕ ಮಂಗಳೂರಿನ ಎಂಸಿಎಫ್ ತಲುಪಿದ ನೈಸರ್ಗಿಕ ಅನಿಲ
ನಾಪ್ತಾ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿರುವ ಕಾರಣದಿಂದ 2014 ರಲ್ಲಿ ಮಂಗಳೂರಿನ ಎಂಸಿಎಫ್ನಲ್ಲಿ ಯೂರಿಯಾ ಮೊದಲಾದ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಬಹುಕೋಟಿ ವೆಚ್ಚದಲ್ಲಿ ನೈಸರ್ಗಿಕ ಅನಿಲ ಸ್ವೀಕರಿಸಲು ಎಂಸಿಎಫ್ ಹೊಸ ಕೇಂದ್ರ ಸ್ಥಾಪಿಸಿದ್ದು, ಇದೀಗ ಯಶಸ್ವಿಯಾಗಿ ಈ ಕೇಂದ್ರಕ್ಕೆ ನೈಸರ್ಗಿಕ ಅನಿಲ ಪೈಪ್ಲೈನ್ ನಲ್ಲಿ ಪೂರೈಕೆಯಾಗಿದೆ.
ನಾಪ್ತಾ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿರುವ ಕಾರಣದಿಂದ 2014ರಲ್ಲಿ ಮಂಗಳೂರಿನ ಎಂಸಿಎಫ್ನಲ್ಲಿ ಯೂರಿಯಾ ಮೊದಲಾದ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ನೈಸರ್ಗಿಕ ಅನಿಲ ಲಭ್ಯವಾಗುವವರೆಗೆ ನಾಪ್ತಾ ಬಳಸಲು ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೊಚ್ಚಿಯಿಂದ ನೈಸರ್ಗಿಕ ಅನಿಲ ಪೂರೈಸಲು ಕಾಮಗಾರಿ ಆರಂಭವಾಗಿತ್ತಾದರೂ ಭೂ ಸ್ವಾಧೀನ ಸೇರಿದಂತೆ ಕೆಲವೊಂದು ಸಮಸ್ಯೆಗಳಿಂದ ಕಾಮಗಾರಿ ಪೂರ್ಣವಾಗಲು ವಿಳಂಬವಾಗಿತ್ತು.
ಬಹುಕೋಟಿ ವೆಚ್ಚದಲ್ಲಿ ನೈಸರ್ಗಿಕ ಅನಿಲ ಸ್ವೀಕರಿಸಲು ಎಂಸಿಎಫ್ ಹೊಸ ಕೇಂದ್ರ ಸ್ಥಾಪಿಸಿದ್ದು ಇದೀಗ ಯಶಸ್ವಿಯಾಗಿ ಈ ಕೇಂದ್ರಕ್ಕೆ ನೈಸರ್ಗಿಕ ಅನಿಲ ಪೈಪ್ಲೈನ್ ನಲ್ಲಿ ಪೂರೈಕೆಯಾಗಿದೆ.