ಕಡಬ:ವಿವಾಹಿತ ಮಹಿಳೆ ತನ್ನ ಮಗುವನ್ನು ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಎನ್ ಕೂಪ್ ಸಿ ಆರ್ಸಿ ಕಾಲೋನಿಯಲ್ಲಿ ನಡೆದಿದೆ.
ಮಗುವನ್ನು ಮನೆಯಲ್ಲೇ ಬಿಟ್ಟು ತಾಯಿ ನಾಪತ್ತೆ - ಐತ್ತೂರು ಗ್ರಾಮದ ಎನ್ ಕೂಪ್ ಸಿ ಆರ್ಸಿ ಕಾಲೋನಿ
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಎನ್ ಕೂಪ್ ಸಿ ಆರ್ಸಿ ಕಾಲೋನಿಯ ಸುಮಿತ್ರಾ ಎಂಬ ಯುವತಿ ಮಗುವನ್ನು ಮನೆಯಲ್ಲೇ ಬಿಟ್ಟು, ಫೆ. 26ರಂದು ನಾಪತ್ತೆಯಾಗಿದ್ದಾರೆ.

ಮಗುವನ್ನು ಮನೆಯಲ್ಲೇ ಬಿಟ್ಟು ತಾಯಿ ನಾಪತ್ತೆ
ನಾಪತ್ತೆಯಾಗಿರುವ ಮಹಿಳೆಯನ್ನು ಎನ್ ಕೂಪ್ ಸಿಆರ್ಸಿ ಕಾಲೋನಿ ನಿವಾಸಿ ಕನಕರಾಜ ಎಂಬುವರ ಪುತ್ರಿ ಸುಮಿತ್ರಾ (30) ಎಂದು ಗುರುತಿಸಲಾಗಿದೆ. ಎಂಟು ವರ್ಷಗಳ ಹಿಂದೆ ಸುಮಿತ್ರಾಳನ್ನು ತಮಿಳುನಾಡಿಗೆ ವಿವಾಹ ಮಾಡಿಕೊಡಲಾಗಿತ್ತು. ಕೆಲವು ಸಮಯಗಳ ಕಾಲ ಗಂಡನ ಮನೆಯಲ್ಲಿದ್ದ ಸುಮಿತ್ರ ಆ ಬಳಿಕ ತನ್ನ ತವರು ಮನೆಗೆ ಬಂದಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 26 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮಗುವನ್ನು ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾಳೆ. ಬಳಿಕ ಎಲ್ಲ ಕಡೆ ಮನೆಯವರು ಹುಡುಕಿದ್ರೂ ಮಹಿಳೆ ಮಾತ್ರ ಸಿಕ್ಕಿಲ್ಲ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 10, 2020, 7:26 AM IST