ಕರ್ನಾಟಕ

karnataka

ETV Bharat / state

ಟಾಯ್ಲೆಟ್​ನೊಳಗೆ ಬಂದಿಯಾದ ಚಿರತೆ ಮತ್ತು ನಾಯಿ..! - subrahmanya leopard and the dog bonded

ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ರೇಗಪ್ಪ ಎಂಬುವರ ಮನೆಯ ಶೌಚಾಲಯದೊಳಗೆ ಚಿರತೆ ಮತ್ತು ನಾಯಿ ಬಂಧಿಯಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಿವಳಿಕೆ ನೀಡಿ ಚಿರತೆಯನ್ನು ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.

leopard and the dog
ಟಾಯ್ಲೆಟ್ ರೂಂನಲ್ಲಿ ನಾಯಿ ಮತ್ತು ಚಿರತೆ

By

Published : Feb 3, 2021, 8:50 AM IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಶೌಚಾಲಯದೊಳಗೆ ಚಿರತೆ ಮತ್ತು ನಾಯಿ ಬಂದಿಯಾದ ಘಟನೆ ಇಂದು ಮುಂಜಾನೆ ನಡೆದಿದೆ.

ಸುಬ್ರಹ್ಮಣ್ಯ ಸಮೀಪದ ಕೈಕಂಬ ರೇಗಪ್ಪ ಎಂಬುವರ ಮನೆಯ ನಾಯಿಯನ್ನು ಹಿಡಿಯಲು ಚಿರತೆ ಓಡಿಸಿಕೊಂಡು ಬಂದಾಗ, ನಾಯಿ ಹೆದರಿ ಓಡಿ ಶೌಚಾಲಯದೊಳಗೆ ನುಗ್ಗಿದೆ, ಅದರ ಜೊತೆಗೆ ಚಿರತೆಯೂ ನುಗ್ಗಿದೆ. ಚಿರತೆಯನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿದ್ದು ಚಿರತೆ ಮತ್ತು ನಾಯಿ ಶೌಚಾಲಯದೊಳಗಡೆ ಬಂದಿಯಾಗಿವೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಿವಳಿಕೆ ನೀಡಿ ಚಿರತೆಯನ್ನು ಹಿಡಿಯಲಾಗುವುದು ಎಂದು ತಿಳಿದು ಬಂದಿದೆ. ಇನ್ನು ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದು, ಚಿರತೆಯನ್ನು ಕೆರಳಿಸದಂತೆ ಅರಣ್ಯ ಅಧಿಕಾರಿಗಳು ವಿನಂತಿ ಮಾಡಿದ್ದಾರೆ.

ಓದಿ:ಬಿಬಿಎಂಪಿ ಕಾಯ್ದೆ ರದ್ದು ಕೋರಿ ಅರ್ಜಿ: ಫೆ.17ಕ್ಕೆ ವಿಚಾರಣೆ ನಿಗದಿ...

ABOUT THE AUTHOR

...view details