ಕರ್ನಾಟಕ

karnataka

ETV Bharat / state

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ವಿಚಾರಣಾಧೀನ ಕೈದಿ: ಕಾರಾಗೃಹಕ್ಕೆ ಕರೆ ತರುವಾಗ ಪರಾರಿ - ಮಂಗಳೂರಿನ ಪಿವಿಎಸ್​ ವೃತ್ತದಲ್ಲಿ ವಿಚಾರಣಾಧೀನ ಕೈದಿ ಪರಾರಿ

ಕಾರಾಗೃಹಕ್ಕೆ ಕರೆತರುವಾಗ ಕೈದಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾರಾಗೃಹಕ್ಕೆ ಕರೆತರುವಾಗ ವಿಚಾರಣಾಧೀನ ಕೈದಿ ಪರಾರಿ

By

Published : Nov 8, 2019, 11:02 PM IST

ದಕ್ಷಿಣ ಕನ್ನಡ:ಕಾರಾಗೃಹಕ್ಕೆ ಕರೆತರುವಾಗ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಮಹಮ್ಮದ್ ರಫೀಕ್ ಎಂಬ ಆರೋಪಿ ನಗರದ ಪಿವಿಎಸ್ ವೃತ್ತದ ಬಳಿ ಪರಾರಿಯಾಗಿದ್ದಾನೆ.

ಸರಗಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳ ಆರೋಪಿಯಾಗಿರುವ ರಫೀಕ್​ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಾಪಾಸ್ ಉಪಕಾರಾಗೃಹಕ್ಕೆ ಕರೆ ತರುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿಯಾಗಿದ್ದಾನೆ.

ಮಹಮ್ಮದ್ ರಫೀಕ್ ತಪ್ಪಿಸಿಕೊಳ್ಳಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದು, ಇದಕ್ಕಾಗಿ ಒಬ್ಬ ಯುವಕ‌ ಮೊದಲೇ ಬೈಕ್​ನೊಂದಿಗೆ ಕಾಯುತ್ತಿದ್ದ. ರಫೀಕ್​ನನ್ನು ಕರೆದುಕೊಂಡು ಬಂದಿರುವ ಪೊಲೀಸರು ಕಾರಾಗೃಹ ತಲುಪುತ್ತಿದ್ದಂತೆ ಬೇಡಿಯನ್ನು ಬಿಚ್ಚಿದ್ದಾರೆ. ಈ ವೇಳೆ ತಕ್ಷಣವೇ ಬೈಕ್ ಏರಿ, ರಫೀಕ್ ಪರಾರಿಯಾಗಿದ್ದಾನೆ. ಪೊಲೀಸರು ತಕ್ಷಣ ಬೆನ್ನಟ್ಟಿದ್ದರೂ ಸಹ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

For All Latest Updates

TAGGED:

ABOUT THE AUTHOR

...view details