ಕರ್ನಾಟಕ

karnataka

ETV Bharat / state

ಸೌತಡ್ಕ ಮನೆ ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆಯಾಗಿಲ್ಲ, ತನಿಖೆ ಚುರುಕು: ಎಸ್​ಪಿ

ಸೌತಡ್ಕ ಮನೆ ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಆದರೆ ಚಿಕ್ಕಮಗಳೂರಿನ ಜೈಪುರ, ಕಾರ್ಕಳದ ಮಾಳದಲ್ಲಿ ಇದೇ ತರಹದ ಘಟನೆಗಳು ಈ ಮೊದಲು ನಡೆದಿವೆ. ಅಲ್ಲಿನ ಪ್ರಕರಣಗಳನ್ನು ಹೋಲಿಸಿ ತನಿಖೆಯನ್ನು ಮುಂದುವರಿಸುತ್ತಿದ್ದೇವೆ. ಈಗಾಗಲೇ ಉಪ್ಪಿನಂಗಡಿ ಪೊಲೀಸ್ ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು‌ ಎಸ್​ಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಎಸ್​ಪಿ ಲಕ್ಷ್ಮೀಪ್ರಸಾದ್
ಎಸ್​ಪಿ ಲಕ್ಷ್ಮೀಪ್ರಸಾದ್

By

Published : Dec 21, 2020, 7:23 PM IST

Updated : Dec 21, 2020, 8:07 PM IST

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಬಳಿಯ ಸೌತಡ್ಕ ಎಂಬಲ್ಲಿನ ಮನೆ ದರೋಡೆ ಪ್ರಕರಣದಲ್ಲಿ ಈಗಾಗಲೇ ದೂರು ದಾಖಲಾಗಿದ್ದು, ಎಂಟರಿಂದ ಒಂಭತ್ತು ಜನರಿಂದ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಮುಖ ಮುಚ್ಚಿರುವ ಕಾರಣ ಯಾರದೂ ಗುರುತು ಪತ್ತೆಯಾಗಿಲ್ಲ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿನ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಚಿಕ್ಕಮಗಳೂರಿನ ಜೈಪುರ, ಕಾರ್ಕಳದ ಮಾಳದಲ್ಲಿ ಇದೇ ತರಹದ ಘಟನೆಗಳು ಈ ಮೊದಲು ನಡೆದಿವೆ. ಅಲ್ಲಿನ ಪ್ರಕರಣಗಳನ್ನು ಹೋಲಿಸಿ ತನಿಖೆಯನ್ನು ಮುಂದುವರಿಸುತ್ತಿದ್ದೇವೆ. ಈಗಾಗಲೇ ಉಪ್ಪಿನಂಗಡಿ ಪೊಲೀಸ್ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು‌ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ಪಿ ಲಕ್ಷ್ಮೀಪ್ರಸಾದ್

ಪ್ರಕರಣ ನಡೆದ ದಿನ ಮಧ್ಯರಾತ್ರಿ ನಾಯಿ ಬೊಗಳಿದೆ ಎಂದು ಮನೆಯವರು ಮೇಲ್ಛಾವಣಿಗೆ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಎಲ್ಲಾ ಆರೋಪಿಗಳು ಮೇಲ್ಛಾವಣಿ ಮೂಲಕವೇ ಮನೆಯೊಳಗೆ ಪ್ರವೇಶಿಸಿದ್ದಾರೆ. ಮೊದಲು ಮನೆಯ ಯಜಮಾನ ತುಕ್ರಪ್ಪ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದ್ದಾರೆ‌. ಬಳಿಕ ಅವರ ಪತ್ನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.‌ ತುಕ್ರಪ್ಪ ಶೆಟ್ಟಿ ಪ್ರಾಥಮಿಕ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಮನೆಗೆ ಬಂದ ಬಳಿಕ‌ ಅವರಿಂದ ಕೂಲಂಕಷವಾಗಿ ಘಟನೆಯ ಬಗ್ಗೆ ವರದಿ ಪಡೆದು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದರು.

ಮಧ್ಯರಾತ್ರಿ ಮನೆಗೆ ನುಗ್ಗಿದ ಖದೀಮರು... ಚಿನ್ನಾಭರಣ, ನಗದು ದೋಚಿ ದರೋಡೆಕೋರರು ಪರಾರಿ

ಮನೆಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ. ಆದರೆ ರಸ್ತೆಯಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ತಪಾಸಣೆ ನಡೆಸುತ್ತಿದ್ದೇವೆ. ಒಂಟಿ ಮನೆಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಹೇಳುತ್ತಲೇ ಇದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕರಪತ್ರಗಳನ್ನು ಹಂಚಲಾಗಿತ್ತು. ಮತ್ತೆ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್​ಪಿ ಲಕ್ಷ್ಮೀಪ್ರಸಾದ್ ಹೇಳಿದರು.

Last Updated : Dec 21, 2020, 8:07 PM IST

ABOUT THE AUTHOR

...view details