ಉಳ್ಳಾಲ: ಸಮಾಜದಲ್ಲಿರುವ ಸಂಘಟನೆಗಳು ಜನರಿಗೆ ಉಪಕಾರ ಮಾಡುವ ಜೊತೆಗೆ ಪರಸ್ಪರ ಪ್ರೀತಿ ಮೂಡಿಸುವ ಉದ್ದೇಶ ಹೊಂದಿರಬೇಕು ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯಿಂದ ಮುನ್ನೂರು ಗ್ರಾಮದ ಸುಭಾಷ್ ನಗರದಲ್ಲಿ ನವೀಕರಿಸಲ್ಪಟ್ಟ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಹಿರಿಯರಿಗೆ ವಿದ್ಯಾಭ್ಯಾಸ ಕಡಿಮೆ ಇರಬಹುದು, ಆದರೆ, ಅವರ ಅನುಭವದ ಮುಂದೆ ಉನ್ನತ ಶಿಕ್ಷಣವೂ ವ್ಯರ್ಥ. ಸಂಘಟನೆಗಳು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.