ಕರ್ನಾಟಕ

karnataka

ETV Bharat / state

ಮೀನು ಹಿಡಿಯುವ ವೇಳೆ ಕಾಲಿಗೆ ಬಲೆ ಸಿಲುಕಿ ಮೀನುಗಾರ ಸಾವು - ಕಾಲಿಗೆ ಬಲೆ ಸಿಲುಕಿ ಮೀನುಗಾರ ಸಾವು

ಮೀನು ಹಿಡಿಯಲು ಹೋಗಿದ್ದ ಜಯ ಪುತ್ರನ್ ಅವರು ಹಿಂದಿರುಗದೇ ಇರುವುದರಿಂದ ಅವರ ಮನೆಯವರು ಹುಡುಕಾಡಿದಾಗ ಮಂಗಳೂರಿನ ಕಸಬ ಬೆಂಗ್ರೆ ಬಳಿ ಅವರ ಮೃತದೇಹ ಪತ್ತೆಯಾಗಿದೆ..

ಮೀನುಗಾರ ಸಾವು
ಮೀನುಗಾರ ಸಾವು

By

Published : Jul 16, 2021, 5:46 PM IST

ಮಂಗಳೂರು : ಮೀನು ಹಿಡಿಯುತ್ತಿದ್ದ ವೇಳೆ ಮೀನಿಗೆ ಹಾಕಲಾಗಿದ್ದ ಬಲೆಯಲ್ಲಿ ಕಾಲು ಸಿಲುಕಿ ನದಿಯಲ್ಲಿ ಮುಳುಗಿ ಮೀನುಗಾರರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರಿನ ತೋಟ ಬೆಂಗ್ರೆಯ ನಿವಾಸಿ ಜಯ ಪುತ್ರನ್(55) ಎಂಬುವರು ಮೃತ ದುರ್ದೈವಿ. ಜಯ ಪುತ್ರನ್ ಅವರು ತೋಟ ಬೆಂಗ್ರೆಯ ಅಳಿವೆಬಾಗಿಲಿನಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. ಈ ಸಂದರ್ಭದಲ್ಲಿ ಜೋರಾದ ಗಾಳಿಗೆ ಇವರ ಕಾಲು ಮೀನು ಹಿಡಿಯುವ ಬಲೆಗೆ ಸಿಲುಕಿದೆ. ನದಿಗೆ ಬಿದ್ದ ಅವರು ಈಜಲಾಗದೆ ನದಿ ನೀರಿನಲ್ಲಿ ಮೃತಪಟ್ಟಿದ್ದಾರೆ.

ಮೀನು ಹಿಡಿಯಲು ಹೋಗಿದ್ದ ಜಯ ಪುತ್ರನ್ ಅವರು ಹಿಂದಿರುಗದೇ ಇರುವುದರಿಂದ ಅವರ ಮನೆಯವರು ಹುಡುಕಾಡಿದಾಗ ಮಂಗಳೂರಿನ ಕಸಬ ಬೆಂಗ್ರೆ ಬಳಿ ಅವರ ಮೃತದೇಹ ಪತ್ತೆಯಾಗಿದೆ. ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶೀಘ್ರದಲ್ಲೇ ಏಳೆಂಟು ಸಚಿವರು ದೆಹಲಿಗೆ ತೆರಳಲಿದ್ದೇವೆ: ಸಚಿವ ಬಿ.ಸಿ.ಪಾಟೀಲ್

ABOUT THE AUTHOR

...view details