ಮಂಗಳೂರು: ಮತಗಟ್ಟೆಯಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿವೋರ್ವರು ಕುಸಿದುಬಿದ್ದ ಪರಿಣಾಮ ತಲೆಗೆ ಗಂಭೀರವಾಗಿರುವ ಘಟನೆ ಕಡಬ ತಾಲೂಕು ಕೊಂಬಾರು ಗ್ರಾಮದ ಮುಗೇರು ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.
ಮತಗಟ್ಟೆಯಲ್ಲಿ ಕುಸಿದುಬಿದ್ದ ಕರ್ತವ್ಯನಿರತ ಪೊಲೀಸ್
ಮತಗಟ್ಟೆಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿವೋರ್ವರು ದಿಢೀರ್ ಕುಸಿದು ಬಿದ್ದ ಘಟನೆ ಕಡಬ ತಾಲೂಕಿ ಕೊಂಬಾರು ಗ್ರಾಮದಲ್ಲಿ ನಡೆದಿದೆ.
ಮತಗಟ್ಟೆಯಲ್ಲಿ ಕರ್ತವ್ಯನಿರತ ಪೋಲಿಸ್ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲು
ಕೊಂಬಾರು ಗ್ರಾಮದ ಮುಗೇರು ಶಾಲೆಯ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಿಕೇರಿ ಮೂಲದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ (42) ಅವರು ಕುಸಿದುಬಿದ್ದ ಪೊಲೀಸ್ ಸಿಬ್ಬಂದಿ.
ಶ್ರೀನಿವಾಸ್ ಅವರ ದೇಹದಲ್ಲಿ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಕುಸಿದು ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದು ತಕ್ಷಣ ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.