ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಸ್ತೆಗೆ ಬಂದ ಮೊಸಳೆ ಮರಿ - ಸುಬ್ರಹ್ಮಣ್ಯದಲ್ಲಿ ಮೊಸಳೆ ಮರಿ ಪತ್ತೆ

ಸುಬ್ರಹ್ಮಣ್ಯದಲ್ಲಿ ಮರಿ ಮೊಸಳೆ ಪತ್ತೆಯಾದ ಹಿನ್ನೆಲೆಯಲ್ಲಿ ಇನ್ನೂ ಹಲವು ಮೊಸಳೆಗಳು ನದಿ ದಡ ಸೇರಿರುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

The crocodile came to the road in Subramanya
ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಸ್ತೆಗೆ ಬಂದ ಮೊಸಳೆ ಮರಿ

By

Published : Jun 30, 2020, 12:58 PM IST

Updated : Jun 30, 2020, 3:04 PM IST

ಸುಬ್ರಹ್ಮಣ್ಯ: ದೇವಸ್ಥಾನದ ಮುಖ್ಯ ರಸ್ತೆಯಲ್ಲಿನ ಪೆಟ್ರೋಲ್‌ ಬಂಕ್‌ ಸಮೀಪ ಮೊಸಳೆ ಮರಿ ಪತ್ತೆಯಾ​ಗಿದೆ.

ಮೊಸಳೆ ಮರಿ ಪತ್ತೆಯಾದ ಅನತಿ ದೂರದಲ್ಲೇ ಕುಮಾರಧಾರಾ ನದಿ ಹರಿಯುತ್ತಿದೆ. ಈ ನದಿಯಿಂದಲೇ ಮೊಸಳೆ ಮರಿ ಬಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಮಳೆಗಾಲದ ಸಂದರ್ಭದಲ್ಲಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದಾಗಿ ನದಿಯಲ್ಲಿರುವ ಮೊಸಳೆಗಳು ದಡ ಸೇರುತ್ತಿವೆ. ಇತ್ತೀಚೆಗೆ ಕಡಬ ತಾಲೂಕಿನ ಇಚ್ಲಂಪ್ಪಾಡಿಯಲ್ಲೂ ಮೊಸಳೆ ಕಾಣಿಸಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಸ್ತೆಗೆ ಬಂದ ಮೊಸಳೆ ಮರಿ

ಮಳೆಯ ಕಾರಣ ಸುಬ್ರಹ್ಮಣ್ಯದಲ್ಲಿ ಇನ್ನೂ ಹಲವು ಮೊಸಳೆಗಳು ನದಿ ದಡ ಸೇರಿರುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವುದರಿಂದ ಆತಂಕ ಮನೆ ಮಾಡಿದೆ.

ಮೊಸಳೆ ಮರಿ ಗಮನಕ್ಕೆ ಬಂದ ತಕ್ಷಣವೇ ಗ್ರಾಮ ಪಂಚಾಯತ್ ಸದಸ್ಯ ದಿನೇಶ್‌ ಬಿ.ಎನ್‌. ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೆ ಸಿಬ್ಬಂದಿಗಳು ಬರುವ ಸಂದರ್ಭದಲ್ಲಿ ಅದು ಕಾಣೆಯಾಗಿತ್ತು.

Last Updated : Jun 30, 2020, 3:04 PM IST

ABOUT THE AUTHOR

...view details